ಅದೇ ಪಾಳು ಬಿದ್ದ ಕಟ್ಟಡ, ಸುತ್ತ ಅವ್ಯವಸ್ಥೆ, ಎಲ್ಲಿ ಹಾವುಗಳು ಬರ್ತಾವೋ ಎಂಬ ಭಯದಲ್ಲೇ ಮಕ್ಕಳನ್ನು ಜೋಪಾನ ಮಾಡುವಂತಹ ಸ್ಥಿತಿಯಲ್ಲಿದ್ದ ನಂಬರ್ 8ರ ಅಂಗನವಾಡಿ ಕಟ್ಟಡಕ್ಕೆ ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಉತ್ತಮ ಕಟ್ಟಡ ಸಿಕ್ಕಿದೆ.
ಕುಂದಗೋಳ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರಿನ ಅವ್ಯವಸ್ಥೆ ತುಂಬಿ ಶಿಥಿಲಾವಸ್ಥೆ ತಲುಪಿದ ಹಳೇ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಂಬರ್ 8ರ ಅಂಗನವಾಡಿ ಸಮಸ್ಯೆ ಕುರಿತು ಕಳೆದ ಇತ್ತಿಚೆಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು. ಈ ಮೂಲಕ ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನ ಸೆಳೆದಿತ್ತು.
ಈ ವರದಿ ಗಮನಿಸಿದ ಅಧಿಕಾರಿಗಳು ಕುಂದಗೋಳ ಪಟ್ಟಣದ ಚೌಕಿಮಠದಲ್ಲಿ ಹೊಸ ಕಟ್ಟಡದಲ್ಲಿ ಬಾಡಿಗೆ ಆಧಾರಿತವಾಗಿ ಅಂಗನವಾಡಿ ಆರಂಭಿಸಿದ್ದು, ಮಕ್ಕಳ ಸುಸಜ್ಜಿತ ಕೊಠಡಿ ಜೊತೆ ಹಾವುಗಳ ಭಯ ಸಹ ದೂರವಾಗಿದೆ.
ಇದೀಗ ಪಟ್ಟಣ ಪಂಚಾಯಿತಿ ಸದಸ್ಯರ ಸಹಕಾರದಿಂದ ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಕೆ ಆಟ ಪಾಠ ಊಟ ಮುಂದುವರೆಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/07/2022 07:33 pm