ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದ ಆ ವೃತ್ತದಲ್ಲಿ ಎತ್ತು, ಚಕ್ಕಡಿ ಕಟ್ಟಿದ್ದ್ಯಾಕೆ ಗೊತ್ತಾ?

ಧಾರವಾಡ: ಅದು ಸದಾ ವಾಹನ ದಟ್ಟನೆಯಿಂದ ಕೂಡಿರುತ್ತಿದ್ದ ವೃತ್ತ.. ಇಷ್ಟಕ್ಕೂ ಧಾರವಾಡಕ್ಕೆ ಅದೊಂದೆ ಪ್ರಮುಖ ದೊಡ್ಡ ವೃತ್ತ.. ಆ ವೃತ್ತದಲ್ಲಿ ವಾಹನದ ಬದಲಿಗೆ ಎತ್ತು ಚಕ್ಕಡಿಗಳು ಕಂಡು ಬಂದವು.

ಹೌದು! ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಕನ್ನಡಪರ ಹಾಗೂ ರೈತ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ಬಂದ್ ಗೆ ಧಾರವಾಡದಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಬೆಂಬಲ ಸೂಚಿಸಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದವು.

ನಗರದ ಜ್ಯುಬಿಲಿ ವೃತ್ತದಲ್ಲಿ ಎಲ್ಲ ಸಂಘಟನೆಗಳ ಕಾರ್ಯಕರ್ತರು ದೊಡ್ಡಮಟ್ಟದಲ್ಲಿ ಜಮಾಯಿಸಿ ಟೈರ್ ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲ ರೈತ ಸಂಘಟನೆ ಮುಖಂಡರು ವೃತ್ತದಲ್ಲಿ ಚಕ್ಕಡಿ ಹೊತ್ತು ತಿರುಗಿದರು. ಜೊತೆಗೆ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದ ಪ್ರಮುಖ ವೃತ್ತದಲ್ಲಿ ಚಕ್ಕಡಿ ಮೆರವಣಿಗೆ ನಡೆಸಿದರು.

ಕೆಲಗೇರಿ ಬಳಿಯ ಬೈಪಾಸ್ ರಸ್ತೆಯನ್ನು ಕೆಲ ಪ್ರತಿಭಟನಾಕಾರರು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇನ್ನು ನಗರದ ಅನೇಕ ಕಡೆಗಳಲ್ಲಿ ಪ್ರತಿಭಟನಾಕಾರರು ಬೈಕ್ ಮೆರವಣಿಗೆ ನಡೆಸಿದರು.

ಮುನ್ನೆಚ್ಚರಿಕಾ ಕ್ರಮವಾಗಿ ಧಾರವಾಡದಲ್ಲಿ ಸೂಕ್ತ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.

Edited By : Nagesh Gaonkar
Kshetra Samachara

Kshetra Samachara

28/09/2020 01:08 pm

Cinque Terre

26.26 K

Cinque Terre

0

ಸಂಬಂಧಿತ ಸುದ್ದಿ