ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂತರಾಷ್ಟ್ರೀಯ ಸೇವೆಗೆ ಭಾರತೀಯ ಅಂಚೆ ಸೇವೆ ಸಿದ್ಧ: ಅಂಚೆ ಸಪ್ತಾಹ ದಿನದ ಅದ್ದೂರಿ ಆಚರಣೆ

ವರದಿ: ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

ಹುಬ್ಬಳ್ಳಿ: ಇಷ್ಟು ದಿನ ರಾಷ್ಟ್ರೀಯ ಮಟ್ಟದಲ್ಲಿ ಇದ್ದ ಭಾರತೀಯ ಅಂಚೆ ಸೇವೆ ಈಗ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಣೆ ಮಾಡಿದೆ. ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸೇವೆಯನ್ನು ನೀಡುವ ಮೂಲಕ ಜನರಿಗೆ ಟಪಾಲು, ದಾಖಲೆಗಳನ್ನು ಹಾಗೂ ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಕಡೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದ ಭಾರತೀಯ ಅಂಚೆ ಸೇವೆ ಈಗ ಅಂತರಾಷ್ಟ್ರೀಯ ಮಟ್ಟದ ಸೇವೆಯನ್ನು ನೀಡಲು ಮುಂದಾಗಿದೆ.

ಹೌದು.. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಂದು ಭಾರತೀಯ ಅಂಚೆ ಕಚೇರಿಯಲ್ಲಿ ಅಂಚೆ ಸೇವೆಯ ವಾರ್ಷಿಕ ಸಪ್ತಾಹ ಹಾಗೂ ಅಂತರಾಷ್ಟ್ರೀಯ ಮೇಲ್ ಸರ್ವಿಸ್ ಸೇವೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಇನ್ನೂ ಎಲ್ಲೆಡೆಯೂ ತಳಿರು ತೋರಣಗಳಿಂದ ಅಂಚೆ ಕಚೇರಿಯು ಕಂಗೊಳಿಸುತ್ತಿದ್ದು, ಗ್ರಾಹಕರಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮತ್ತಷ್ಟು ಖುಷಿಯನ್ನು ತಂದುಕೊಟ್ಟಿತು.

ಇನ್ನೂ ಹಲವಾರು ಯೋಜನೆ ಮೂಲಕ ಗ್ರಾಹಕರ ನಂಬಿಕೆ ವಿಶ್ವಾಸವನ್ನು ಗಳಿಸಿರುವ ಭಾರತೀಯ ಅಂಚೆ ಸೇವೆ ಈಗ ಅಂತರಾಷ್ಟ್ರೀಯ ಮಟ್ಟದ ಸೇವೆಯನ್ನು ಹುಬ್ಬಳ್ಳಿಯ ಜನರಿಗೆ ನೀಡಲು ಮುಂದಾಗಿದೆ. ಹಾಗಿದ್ದರೇ ಈ ಸೇವೆಯ ಬಗ್ಗೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಏನು ಹೇಳ್ತಾರೆ ಕೇಳಿ.

ಒಟ್ಟಿನಲ್ಲಿ ಅಂಚೆ ಸೇವೆ ಈಗ ಅಂತರಾಷ್ಟ್ರೀಯ ಮಟ್ಟದ ಸೇವೆಯನ್ನು ಜನರಿಗೆ ನೀಡುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಇನ್ನೂ ಹೆಚ್ಚಿನ ಸೇವೆಗಳು ನಮ್ಮ ಹುಬ್ಬಳ್ಳಿ ಜನರಿಗೆ ದೊರೆಯಲಿ ಎಂಬುವುದು ನಮ್ಮ ಆಶಯ.

Edited By : Nagesh Gaonkar
Kshetra Samachara

Kshetra Samachara

11/10/2021 03:12 pm

Cinque Terre

29.27 K

Cinque Terre

0

ಸಂಬಂಧಿತ ಸುದ್ದಿ