ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
ಕುಂದಗೋಳ : ಜಂಪರೋಪ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಗೈದು ಬರೋಬ್ಬರಿ 23 ಚಿನ್ನದ ಪದಕ ಪಡೆದ ಗ್ರಾಮೀಣ ಪ್ರತಿಭೆ ಐಶ್ವರ್ಯ ಹುಬ್ಬಳ್ಳಿಮಠ ಸಾಧನೆ ಕುರಿತು "ಜಂಪರೋಪ್ ಕ್ರೀಡೆಯಲ್ಲಿ 23 ಚಿನ್ನದ ಪದಕ ಗೆದ್ದ ಕುಂದಣದ ಪ್ರತಿಭೆ ಐಶ್ವರ್ಯ ಹುಬ್ಬಳ್ಳಿಮಠ" ಎಂಬ ಶಿರ್ಷಿಕೆ ಅಡಿಯಲ್ಲಿ ಪಬ್ಲಿಕ್ ನೆಕ್ಸ್ಟ್ ಸ್ಟೋರಿ ಪ್ರಕಟಿಸಿ
ಗ್ರಾಮೀಣ ಪ್ರತಿಭೆಯನ್ನ ಇಡೀ ಜಿಲ್ಲೆಗೆ ಪರಿಚರಿಯಿಸಿತ್ತು.
ಈ ಸ್ಟೋರಿ ನೋಡಿದ ಧಾರಾವಾಡದ ನೂತನ ಎಸ್.ಪಿ ಎಂ.ಕೃಷ್ಣಕಾಂತ ಹಾಗೂ ಜಿಲ್ಲಾ ಗ್ರಾಮೀಣ ಡಿವೈಎಸ್ಪಿ ರವಿ ನಾಯಕ ಇನ್ಸಪೆಕ್ಟರ್ ಬಸವರಾಜ ಕಲ್ಲಮ್ಮನವರ ಉಪಸ್ಥಿತಿಯಲ್ಲಿ ಇಂದು ಕುಂದಗೋಳದ ಐಶ್ವರ್ಯ ಹುಬ್ಬಳ್ಳಿಮಠ ಮನೆಗೆ ಆಗಮಿಸಿ ಸನ್ಮಾನ ಮಾಡಿ ಉಡುಗೊರೆ ನೀಡಿದ್ದಲ್ಲದೆ ಆಕೆ ಸಾಧನೆ ಹಾದಿ ಕಥೆ ಕೇಳಿ ಇನ್ನು ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಿ ಅಗತ್ಯ ಬಿದ್ದಲ್ಲಿ ಸಹಾಯ ಪಡೆಯಲು ತಿಳಿಸಿದರು.
ತಮ್ಮ ಮಗಳ ಸಾಧನೆಯ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸ್ಟೋರಿ ನೋಡಿ ಪೊಲೀಸ್ ಅಧಿಕಾರಿಗಳ ಆಗಮನ ಸನ್ಮಾನಕ್ಕೆ ಖುಷೀ ಆದ ಐಶ್ವರ್ಯ ಹುಬ್ಬಳ್ಳಿಮಠ ಹಾಗೂ ಕುಟುಂಬಸ್ಥರು ಪಬ್ಲಿಕ್ ನೆಕ್ಸ್ಟ್ ಅಭಿನಂದನೆ ಸಲ್ಲಿಸಿದರು.
Kshetra Samachara
04/11/2020 08:06 am