ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಅದು ಗಂಡು ಮೆಟ್ಟಿದ ನಾಡು ಎಂದು ಹೆಸರಾದ ಊರು. ಆದ್ರೆ ಈ ಗಂಡು ಮೆಟ್ಟಿದ ನಾಡಿನಲ್ಲಿ ಕ್ರೈಮ್ ಮಾಡೋರಿಗೆ ಏನೂ ಕಮ್ಮಿ ಇಲ್ಲ. ಇಲ್ಲಿ ಚೂರಿ, ಚಾಕು ಇರಿತ ಸಾಮಾನ್ಯವಾಗಿದೆ. ಕಳೆದ ವಾರ ವ್ಯಾಪಾರಿಗೆ ಚಾಕು ಇರಿದು ಒಬ್ಬ ಅಂದರ್ ಆದ್ರೆ, ಎರಡು ದಿನಗಳ ಹಿಂದೆ ಬುದ್ಧಿ ಹೇಳಿದ ಕೈ ಮುಖಂಡನಿಗೆ ಚಾಕು ಇರಿದಿದ್ದಾರೆ. ನಿನ್ನೆ ರಾತ್ರಿ ಅಣ್ಣ ತಮ್ಮನಿಗೆ ಚಾಕು ಇರಿದಿದ್ದಾನೆ. ವಾಣಿಜ್ಯ ನಗರದಲ್ಲಿ ಪುಡಿ ರೌಡಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಇನ್ನು ಮೀಸೆ ಚಿಗುರದ ಹುಡಗರ ಕೈಯಲ್ಲಿ ಚೂರಿ ಚಾಕು ಸಾಮಾನ್ಯವಾಗಿದೆ. ಅಪರಾಧ ನಿಯಂತ್ರಿಸಬೇಕಿದ್ದ ಪೊಲೀಸರು ಸಿನಿಮಾ ಸ್ಟೈಲ್‌ನಲ್ಲಿ ಎಲ್ಲ ಮಗಿದ ಮೇಲೆ ಬಂದು ಅರೆಸ್ಟ್ ಮಾಡಿದ್ದೀವಿ ಎಂದು ಬೀಗುತ್ತಿದ್ದಾರೆ.
ಹೌದು,,, ವಾಣಿಜ್ಯ ನಗರಿ ಎಂದು ಹೆಸರಾಗಿರೋ ಹುಬ್ಬಳ್ಳಿಯಲ್ಲಿ ಕಳೆದ ಕೆಲ ದಿನಗಳಿಂದ ಪುಡಿ ರೌಡಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ದಿನಕ್ಕೆ ಒಂದಲ್ಲ ಒಂದು ಕಡೆ ಚಾಕು ಚೂರಿ ಇರಿತ ಕಾಮನ್ ಆಗಿದೆ. ಇನ್ನೂ ಮೀಸೆ ಚಿಗುರಿರದ ಹುಡುಗ್ರು ಕೂಡಾ ಚಾಕು ಚೂರಿ ಇಟ್ಕೊಂಡು ಓಡಾಡ್ತಿದ್ದಾರೆ. ಹುಬ್ಬಳ್ಳಿ ಧಾರವಾಡದ ಅವಳಿ ನಗರ ಪೊಲೀಸ್ರು ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ. ಎಲ್ಲ ಮುಗದ ಮೇಲೆ ಬಂದು ಚಾಕು ಹಾಕಿದವರನ್ನ ಅರೆಸ್ಟ್ ಮಾಡಿ ಪೋಸ್ ಕೊಡ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಕೆಲ ದಿನಗಳ ಹಿಂದೆ ಬುದ್ದಿ ಹೇಳಲು ಹೋದ ಕಾಂಗ್ರೆಸ್ ಮುಖಂಡನ ಮೇಲೆ ಮೂರು ಕಡೆ ಚಾಕು ಹಾಕಿದ್ದಾರೆ. ಅಷ್ಟೇ ಅಲ್ಲದೆ ಗಂಡನ ಸಾವಿಗೆ ನ್ಯಾಯ ಸಿಗದೆ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುಟ್ಕಾ ವಿಚಾರಕ್ಕೆ ಚಾಕು ಇರಿದಿದ್ದಾರೆ. ಹಣಕ್ಕಾಗಿ ಕಿಡ್ನ್ಯಾಪ್ ಮಾಡಿದ್ದಾರೆ. ಶಾಂತವಾಗಬೇಕಿದ್ದ ಹುಬ್ಬಳ್ಳಿ ಈಗ ಚಾಕು ಚೂರಿಗಳಿಂದ ಅಶಾಂತಿ ಪಡೆಯುತ್ತಿದೆ. ಇಷ್ಟೆಲ್ಲ ಘಟನೆ ನಡೆದರೂ ಕೂಡ ಹುಬ್ಬಳ್ಳಿ ಧಾರವಾಡ-ಕಮೀಷನರರೇಟ್ ಏನು ಮಾಡ್ತಿದೆ. ಪುಂಡರನ್ನು ಅರೆಸ್ಟ್ ಮಾಡಿದ್ರೂ ಕೂಡ ಚಾಕು-ಚೂರಿಗಳ ಇರಿತ ಹಾವಳಿ ಮಾತ್ರ ಕಡಿಮೆಯಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ಭಯಗೊಂಡಿದ್ದಾರೆ.
ಇನ್ನು ಕಳೆದ 28ರಂದು ಸಣ್ಣ ಪುಟ್ಟ ವ್ಯಾಪಾರಿ ಮೇಲೆ ಕೇವಲ 50, 100ರೂ. ಹಣದಾಸೆಗೆ ಕೊತಂಬ್ರಿ ಗ್ಯಾಂಗ್ ಚೂರಿ ಇರಿದು ಅಂದರ್ ಆಗಿದೆ. ಹುಬ್ಬಳ್ಳಿಯ ಕರ್ಜಗಿ ಓಣಿಯ ಮಹಮ್ಮದ್‌ಗೆ ಚಾಕು ಇರಿಯಲಾಗಿತ್ತು. ಹುಡುಗಿ ವಿಚಾರಕ್ಕೆ ಇಬ್ಬರು ಯುವಕರು ನಡು ರಸ್ತೆಯಲ್ಲೆ ಚಾಕು ಹಿಡಿದುಕೊಂಡು ಹಲ್ಲೆ ಮಾಡಿಕೊಂಡಿದ್ದರು. ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡುತ್ತಿದ್ದಾರೆ ನಿಜ. ಆದ್ರೆ ಕ್ರೈಂ ಮಾತ್ರ ಫುಲ್ ಸ್ಟಾಪ್ ಆಗುತ್ತಿಲ್ಲ.
ಒಟ್ಟಾರೆ ಹುಬ್ಬಳ್ಳಿಯಲ್ಲಿ ಚಾಕು, ಚೂರಿ ಹಾಕೋ ಘಟನೆಗಳು ನಡೆಯುತ್ತಿವೆ.. ಹಾಡಹಗಲೆ ಪುಡಿ ರೌಡಿಗಳ ಅಟ್ಟಹಾಸ ಮೀತಿ ಮೀರಿದೆ. ಈ ಕ್ರೈಮ್ ಗಳಿಂದ ಹುಬ್ಬಳ್ಳಿ ಜನರು ಭಯಬೀತರಾಗಿದ್ದಾರೆ. ಆದಷ್ಟು ಬೇಗ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಭೂರಾಮ್ ಅವರು ಕ್ರೈಮ್ ಕಂಟ್ರೋಲ್ ಮಾಡಬೇಕಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
06/10/2022 06:11 pm