ಕುಂದಗೋಳ : ಜನೇವರಿ 3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆಲಸಿಕೆ ಅಭಿಯಾನ ನಡೆಸಲಾಗುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಲಸಿಕಾ ಅಭಿಯಾನ ಆರಂಭವಾಗಿದೆ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕಾ ಅಭಿಯಾನ ನಡೆಸಲಾಗುತ್ತಿದ್ದು, ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಲಸಿಕೆ ಕಾರ್ಯಕ್ರಮವನ್ನು ಕುಂದಗೋಳ ಪಟ್ಟಣದ ಜೆ.ಎಸ್.ಎಸ್ ಕಾಲೇಜ್'ನಲ್ಲಿ ರಿಬ್ಬನ್ ಕತ್ತರಿಸಿ ಹಾಗೂ ಗಿಡಗಳಿಗೆ ನೀರು ಹಾಕುವ ಮೂಲಕ ಕಾರ್ಯದರ್ಶಿ ಯಲ್ಲಪ್ಪ ಮೆಗುಂಡಿಯವರು ಚಾಲನೆ ನೀಡಿದರು.
ಬಳಿಕ 9, 10, 11 ,12 ತರಗತಿ ವಿದ್ಯಾರ್ಥಿಗಳಿಗೆ ಮೊದಲನೇ ಹಂತದ ಲಸಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿಯಾದ ಯಲ್ಲಪ್ಪ ಮೆಗುಂಡಿಯವರು, ತಾಲೂಕು ಆರೋಗ್ಯಾಧಿಕಾರಿಗಳು, ಹಾಗೂ ಪ್ರಾಚಾರ್ಯರಾದ ಲಕ್ಷ್ಮಣ ದೊಡ್ಡಮನಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಮ್.ಸಿ.ಶಿಗ್ಲಿ ,ಜೆ. ಎನ್.ಕೊಟೆ, ಶ್ರೀಮತಿ ನರಗುಂದ ಮೇಡಂ, ಮುಖ್ಯೋಪಾದ್ಯಯನಿ ಇಂಗ್ಲಿಷ್ ಮಾಧ್ಯಮ ಪ್ರೌಢ ಹಾಗೂ ಕಾಲೇಜು ವಿಭಾಗದ ಎಸ್.ವಿ.ಕುನ್ನೂರು, ಮೃತ್ಯುಂಜಯ ಉಪ್ಪಿನ, ಎಮ್.ಎಮ್ ಸೋನಾರ್, ಎಮ್.ಎಚ್,ಯಲಿವಾಳ, ದೈಹಿಕ ಶಿಕ್ಷಕರಾದ ಕಾಳೇಲಿ ಸರ್ ಹಾಗೂ ಜೆಎಸ್ಎಸ್ ವಿದ್ಯಾಪೀಠದ ವಿಭಾಗದ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
05/01/2022 03:34 pm