ಹುಬ್ಬಳ್ಳಿ: ಕರ್ಫ್ಯೂ ಸಮಯ ಸದ್ಬಳಿಕೆ ಮಾಡಿಕೊಂಡ ಸ್ಮಾರ್ಟ್ ಸಿಟಿ: ಚುರುಕುಗೊಂಡ ಕಾಮಗಾರಿ....!

ಹುಬ್ಬಳ್ಳಿ: ಇಷ್ಟು ದಿನ ಆಮೆ ವೇಗದಲ್ಲಿ ನಡೆಯುತ್ತಿದ್ದ ಅವಳಿನಗರದ ಮಹತ್ವಪೂರ್ಣ ಯೋಜನೆ ಕಾಮಗಾರಿ ಈಗ ಚುರುಕುಗೊಂಡಿದೆ. ಜನತಾ ಕರ್ಫ್ಯೂ ಸದ್ಬಳಿಕೆ ಮಾಡಿಕೊಂಡ ಕಾಮಗಾರಿ ಮಿಂಚಿನ ವೇಗದಲ್ಲಿ ಮುನ್ನಡೆಯುತ್ತಿದ್ದೆ. ಹಾಗಿದ್ದರೇ ಯಾವುದು ಆ ಮಹತ್ವಪೂರ್ಣದ ಕಾಮಗಾರಿ ಅಂತೀರಾ ಈ ಸ್ಟೋರಿ ನೋಡಿ..

ಕಳೆದ ಕೆಲವು ತಿಂಗಳಿದ ನಗರದಲ್ಲಿ ಆಮೆಗತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ ಸಿಟಿ ಯೋಜನೆ ಕಾಮಗಾರಿಗೆ ಜನತಾ ಕರ್ಫ್ಯೂನಿಂದ ವೇಗ ಹೆಚ್ಚಳವಾಗಿದ್ದು, ನಗರದಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಹೌದು.. ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ, ಯುಜಿಡಿ ಕಾಮಗಾರಿ, ಉದ್ಯಾನವನ ಕಾಮಗಾರಿ, ನೆಹರು ಮೈದಾನ ಕಾಮಗಾರಿ, ಈಜುಕೋಳ ಕಾಮಗಾರಿ ಸೇರಿದಂತೆ ಎಲ್ಲವೂಕ್ಕೂ ಜನತಾ ಕರ್ಫ್ಯೂ ಎಫೆಕ್ಟ್ ನಿಂದ ಹೆಚ್ಚಿನ ವೇಗ ಸಿಕ್ಕಂತಾಗಿದೆ. ನಗರದ ಪ್ರಮುಖ ರಸ್ತೆಗಳಾದ ಕೊಪ್ಪಿಕರ ರಸ್ತೆ, ಜೆ.ಸಿ.ನಗರ, ದುರ್ಗದ ಬಯಲು, ಬೆಳಗಾವಿ ಗಲ್ಲಿ, ದಾಜೀಬಾನ ಪೇಟೆ, ವೀರಾಪುರ ಓಣಿ ರಸ್ತೆ, ಅಂಚಟಗೇರಿ ಓಣಿ, ಸ್ಟೇಶನ್ ರಸ್ತೆ, ತಬೀಬ ಲ್ಯಾಂಡ್, ಮಂಟೂರ ರಸ್ತೆ, ಪ್ರಿಯದರ್ಶಿನಿ ಕಾಲೋನಿ, ಸಿಲ್ವರ ಟೌನ್, ವಿವೇಕಾನಂದನಗರ ಸೇರಿದಂತೆ ನಗರದ ಬಹುತೇಕ ಕಡೆ ನಡೆಯುತ್ತಿರುವ ಸ್ಮಾರ್ಟ ಸಿಟಿ ಕಾಮಗಾರಿಗಳು ನಡೆಯುತ್ತಿದ್ದು ಎಲ್ಲೆಡೆ ಜೋರಾಗಿದೆ.

ಈ ಹಿಂದೆ ಒಂದು ಕಾಮಗಾರಿ ಒಂದು ಪ್ರದೇಶದಲ್ಲಿ ಕೈಗೊಳ್ಳಬೇಕಾದರೆ ವಾಹನ ಸಂಚಾರ, ಜನ ಸಂಚಾರ ಇಲ್ಲದೆ ಇರುವ ಸಮಯ ನೋಡಿಕೊಂಡು ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಬೇಕಾಗಿತ್ತು, ಆದರೆ ಇದೀಗ ಎಲ್ಲದಕ್ಕೂ ಅವಕಾಶ ಸಿಕ್ಕಂತಾಗಿದೆ. ಅದೇ ರೀತಿ ನಗರದ ಹಲವು ರಸ್ತೆಗಳ ಕಾಮಗಾರಿಗೂ ಸಹ ಇದೇ ವೇಗ ಕಲ್ಪಿಸಬೇಕಾಗಿದೆ. ಅದೇ ರೀತಿ ಉಣಕಲ್ಲ ಕೆರೆ ಕಾಮಗಾರಿ, ಇಂದಿರಾ ಗಾಜಿನ ಮನೆ ಉದ್ಯಾನವನದ ಕಾಮಗಾರಿಗಳಿಗೆ ವೇಗ ಸಿಗಬೇಕಾಗಿದೆ.

ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ ಸಿಟಿ ಕಾಮಗಾರಿಯಲ್ಲಿ ಎಲ್ಲೆಡೆ ವೇಗವಾಗಿ ನಡೆಯುತ್ತಿದ್ದು ಸುಮಾರು ಶೇ.70 ರಷ್ಟು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸುಮಾರು ಶೇ.100 ರಷ್ಟು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು, ಆದರೆ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಮಿಕರು ಕೆಲಸಕ್ಕೆ ಆಗಮಿಸಲು ತೊಂದರೆಯಾಗಿದ್ದರ ಹಿನ್ನೆಲೆಯಲ್ಲಿ ಶೇ.70 ರಷ್ಟು ಕಾರ್ಮಿಕರು ಕಾಮಗಾರಿಯಲ್ಲಿ ಪಾಲ್ಗೊಂಡು ಕಾಮಗಾರಿಗೆ ವೇಗ ನೀಡಿದ್ದಾರೆ.

Kshetra Samachara

Kshetra Samachara

6 days ago

Cinque Terre

70.9 K

Cinque Terre

2

  • Rafiqkhan Soudagar
    Rafiqkhan Soudagar

    go and see karwar road first.....mangal Oni to arvind nagar road hengitho hange idhe...

  • sunil
    sunil

    dharwad raste yavag madtiri sir bare Hubli ashte smart alla