ಕಲಘಟಗಿ: ಕಲಘಟಗಿ ಪಟ್ಟಣದಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಗೆ ಸುಸಜ್ಜಿತ ವ್ಯವಸ್ಥೆ ಬೇಕು ಎಂದು ಸಾರ್ವಜನಿಕರು ಬೇಡಿಕೆ ಮುಂದಿಟ್ಟಿದ್ದಾರೆ.
ಕಲಘಟಗಿ ತಾಲೂಕಿಗೆ ಒಟ್ಟು 84 ಹಳ್ಳಿಗಳು ಬರುತ್ತಿದ್ದು ಎಲ್ಲ ಹಳ್ಳಿಗಳಲ್ಲಿ ಕೃಷಿಯೇ ಮೂಲಾಧಾರ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕಲಘಟಗಿಯ ಮಂಗಳವಾರ ಸಂತೆ ಬಿಟ್ಟರೆ ಬೇರೆ ಆಯ್ಕೆ ಇಲ್ಲ. ಪ್ರತಿಯೊಬ್ಬ ರೈತರು ತರಕಾರಿಗಳನ್ನು ಇಲ್ಲಿಯೇ ಮಾರಾಟ ಮಾಡುತ್ತಿರುವುದರಿಂದ ಜನ ದಟ್ಟಣೆ ಜೊತೆಗೆ ಸ್ಥಳದ ಅಭಾವ ಇದೆ. ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಬೀದಿ ದನಗಳ ಕಾಟ ವಿಪರೀತವಾಗಿದೆ. ನೀರಿನ ವ್ಯವಸ್ಥೆ ಇಲ್ಲ. ಪಟ್ಟಣ ಪಂಚಾಯತಿಗೆ ಸಂತೆ ಶುಲ್ಕ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Kshetra Samachara
23/02/2022 02:20 pm