ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೈರುತ್ಯ ರೈಲ್ವೆಯಿಂದ ಸರಕು ಸಾಗಣಿಕೆಯ ಆದಾಯದಲ್ಲಿ ದಾಖಲೆಯ ಗಳಿಕೆ !

ಹುಬ್ಬಳ್ಳಿ: ನೈಋತ್ಯ ರೈಲ್ವೆಯ ನವೆಂಬರ್ 2021ರಲ್ಲಿ ರೂ.10.42 ಕೋಟಿ ಪಾರ್ಸಲ್ ಆದಾಯವನ್ನು ದಾಖಲಿಸಿದ್ದು ಕಳೆದ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ಆದಾಯ(ರೂ.6.63 ಕೋಟಿ)ಕ್ಕಿಂತ ಶೇ. 57.1 ರಷ್ಟು ಹೆಚ್ಚಾಗಿದೆ. ಏಪ್ರಿಲ್ 2021 ರಿಂದ ನವೆಂಬರ್ 2001ರವರೆಗೆ ಒಟ್ಟು ಆದಾಯ ರೂ. 79.68 ಕೋಟಿಯಾಗಿದ್ದು ಇದು ಕಳೆದ ವರ್ಷದ ಇದೇ ಅವಧಿಯ ಆದಾಯ(ರೂ.31.97ಕೋಟಿ) ಕ್ಕಿಂತ ಶೇ.149.26 ರಷ್ಟು ಹೆಚ್ಚಾಗಿದೆ.

ಹೌದು.ಕ್ಯಾತ್ಸಂದ್ರ ದಿಂದ ಮರಿಯಾನಿ ಮತ್ತು ಬಾಯ್ ಹಾಟ್ ನಿಲ್ದಾಣಗಳಿಗೆ 0.556 ಟನ್ ಗಳಷ್ಟು

ಉತ್ಪನ್ನಗಳನ್ನೊಳಗೊಂಡ 2 ಕಿಸಾನ್ ರೈಲುಗಳನ್ನು ಸಂಚರಿಸಿ ರೂ. 0.370 ಕೋಟಿ ಆದಾಯ ಗಳಿಸಿದೆ ಕಿಸಾನ್ ರೈಲುಗಳು ಸ್ಥಳೀಯ ರೈತರು ಶೀಘ್ರವಾಗಿ ನಶಿಸಿಹೋಗುವ ಉತ್ಪನ್ನಗಳನ್ನು ದೇಶದಾದ್ಯಂತ ಮಾರುಕಟ್ಟೆಗಳಿಗೆ ಸರಕು ಶೇ. 50ರ ರಿಯಾಯಿತಿ ದರದ ಸಾಗಣೆ ವೆಚ್ಚದಲ್ಲಿ ಸಾಗಿಸುವುದರಿಂದ ರೈತರಿಗೆ ಒಂದು ವರವಾಗಿ ಪರಿಣಮಿಸಿದೆ.

ನೈಋತ್ಯ ರೈಲ್ವೆಯು 6 ಎನ್ ಎಂ ಜಿ ರೇಕುಗಳನ್ನು ಸಾಗಿಸಿದ್ದು ಇವುಗಳಲ್ಲಿ ಮೂರು ನಂಜನಗೂಡಿನಿಂದ

ಆಗ್ನೇಯ ರೈಲ್ವೆಯ ಖರಗಪುರ ವಿಭಾಗದಲ್ಲಿರುವ ಸಂಕ್ರೈಲ್ ಗೂಡ್ಸ್ ಯಾರ್ಡ್ ಗೆ ಹಾಗೂ ಇನ್ನು ಮೂರು ವಾಸ್ಕೋ ಡ ಗಾಮ ದಿಂದ ಉತ್ತರ ರೈಲ್ವೆಯ ದೆಹಲಿ ವಿಭಾಗದ ಇನ್ ಲ್ಯಾಂಡ್ ಕಂಟೈನರ್ ಡಿಪೋ ಇಲ್ಲಿಗೆ ಒಟ್ಟು 1.36 ಟನ್ ತೂಕದ ಟೈಯರ್ ಗಳು ಹಾಗೂ ನೆಸ್ಲೆ ಉತ್ಪನ್ನಗಳ ಸರಕುಗಳೊಂದಿಗೆ ಸಾಗಿಸಲ್ಪಟ್ಟಿದ್ದು ಇದರಿಂದ ರೂ .0.763 ಕೋಟಿ ಆದಾಯ ಗಳಿಕೆ ಯಾಗಿದೆ. ಆಟೋಮೊಬೈಲ್ ಉತ್ಪನ್ನ ತಯಾರಕರಿಗೆ ರೈಲು ಸಾರಿಗೆ ವಿಶ್ವಾಸಾರ್ಹ ನೆಚ್ಚಿನ ಸಾರಿಗೆಯಾಗಿ ಹೊರ ಹೊಮ್ಮುತ್ತಿದೆ.

ನವೆಂಬರ್ ನಲ್ಲಿ ನೈಋತ್ಯ ರೈಲ್ವೆಯಿಂದ 9 ಗುತ್ತಿಗೆ ನೀಡಿದ ಪಾರ್ಸಲ್ ಕಾರ್ಗೋ ವಿಶೇಷ ಎಕ್ಸ್ ಪ್ರೆಸ್

ರೈಲುಗಳನ್ನು ಯಶವಂತಪುರದಿಂದ ದೆಹಲಿಯ ಇನ್ ಲ್ಯಾಂಡ್ ಕಂಟೈನರ್ ಡಿಪೋಗೆ ಸಂಚರಿಸಲಾಗಿದ್ದು 3.29 ಟನ್ ಸರಕುಸಾಗಣೆ ಯೊಂದಿಗೆ ರೂ 1.222 ಕೋಟಿ ಆದಾಯ ಗಳಿಕೆ ಆಗಿದೆ. ಇದು ಸಣ್ಣ ಪ್ರಮಾಣದ ಕೈಗಾರಿಕೆಗಳು, ವ್ಯಾಪಾರಿಗಳು, ಬೆಂಗಳೂರು ವಲಯದ ಉತ್ಪಾದಕರಿಗೆ ಉತ್ಪನ್ನಗಳನ್ನು ದೇಶದ ವಿವಿಧೆಡೆಗೆ ಸಾಗಿಸಲು ಸಹಾಯ ಮಾಡುತ್ತಿದೆ.

ವಾಸ್ಕೋಡಗಾಮ ದಿಂದ ಮಧ್ಯಯ ರೈಲ್ವೆ ನಾಗಪುರ ವಿಭಾಗದ ಕಲ್ಮೇಶ್ವರಕ್ಕೆ 0.218ಟನ್ ಗಳಷ್ಟು ನೆಸ್ಲೆ ಉತ್ಪನ್ನಗಳು ಹಾಗೂ ಟೈರ್ ಗಳನ್ನೊಳಗೊಂಡ ಒಂದು ಇನ್ಡೆನ್ಟೆಡ್ ಜಿಎಸ್ ವಿಶೇಷ ಪಾರ್ಸೆಲ್ ರೈಲನ್ನು ರವಾನಿಸಿದ್ದು ರೂ 0.106ಕೋಟಿ ಆದಾಯ ಲಭಿಸಿದೆ.

ವಾಸ್ಕೋ ಡ ಗಾಮದಿಂದ ಗುವಾಹಟಿಗೆ ಮತ್ತು ಕೆ ಎಸ್ ಆರ್ ಬೆಂಗಳೂರಿನಿಂದ ದೀಮಾ ಪುರಕ್ಕೆ 2 ಸಮಯ ನಿಗದಿತ ವೇಳಾಪಟ್ಟಿಯ ಎಕ್ಸ್ ಪ್ರೆಸ್ ರೈಲುಗಳನ್ನು 1.078 ಟನ್ ಗಳಷ್ಟು ನೆಸ್ಲೆ ಉತ್ಪನ್ನಗಳು ಹಾಗೂ ಇತರ ವಸ್ತುಗಳೊಂದಿಗೆ ಸಂಚರಿಸಿದ್ದು ಇದರಿಂದ ರೂ.78.5 ಲಕ್ಷಗಳಷ್ಟು ಆದಾಯ ಗಳಿಕೆಯಾಗಿದೆ.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರು ಕೋವಿಡ್-19 ಹಾಗೂ ಮಾನ್ಸೂನ್ ಗಳ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಪಾರ್ಸಲ್ ಹಾಗೂ ಸರಕುಗಳ ಲೋಡಿಂಗ್ ನಲ್ಲಿನ ಉತ್ತಮ ಸಾಧನೆ ಗಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು

ನೈಋತ್ಯ ರೈಲ್ವೆ ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

03/12/2021 01:03 pm

Cinque Terre

36.75 K

Cinque Terre

0

ಸಂಬಂಧಿತ ಸುದ್ದಿ