ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಸಿವು ನೀಗಿಸಿದ್ದ ಕ್ಯಾಂಟಿನ್ ನಿರ್ವಹಣೆಯೇ ದೊಡ್ಡ ಸವಾಲು.!

ಹುಬ್ಬಳ್ಳಿ: ಅದು ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಆಹಾರ ಒದಗಿಸಿ ಹಸಿವು ನೀಗಿಸುವ ಕ್ಯಾಂಟಿನ್. ಅವಳಿನಗರದಲ್ಲಿ ಇಂತಹ 09 ಕ್ಯಾಂಟೀನ್‌ಗಳು ಇದೀಗ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿವೆ. ಕ್ಯಾಂಟೀನ್‌ಗಳ ನಿರ್ವಹಣೆಯ ಗುತ್ತಿಗೆ ಪಡೆದವರಿಗೆ ಮಹಾನಗರ ಪಾಲಿಕೆ ಮತ್ತು ಕಾರ್ಮಿಕ ಇಲಾಖೆ ಸುಮಾರು 4 ಕೋಟಿ ರೂಪಾಯಿಯಷ್ಟು ಬಿಲ್ ಬಾಕಿ ಉಳಿಸಿಕೊಂಡಿವೆ. ಇದರಿಂದ ನಿರ್ವಹಣೆ ಮಾಡುವುದು ದೊಡ್ಡ ಸವಾಲಾಗಿದೆ. ಹಾಗಿದ್ದರೇ ಯಾವುವು ಕ್ಯಾಂಟಿನ್ ಅಂತೀರಾ ಈ ಸ್ಟೋರಿ ನೋಡಿ.

ಬೆಳಿಗ್ಗೆ ಉಪಾಹಾರಕ್ಕೆ 5 ಹಾಗೂ ಮಧ್ಯಾಹ್ನ, ರಾತ್ರಿ ಊಟಕ್ಕೆ 10ರೂಪಾಯಿ ಪಡೆದುಕೊಳ್ಳುವ ಇಂದಿರಾ ಕ್ಯಾಂಟಿನ್ ಬಡವರ ಪಾಲಿಗೆ ದಾಸೋಹದ ಪುಣ್ಯ ಸ್ಥಳವಾಗಿದೆ. ಆದರೆ ಸಕಾಲಕ್ಕೆ ಬಿಲ್ ಬಿಡುಗಡೆ ಮಾಡದಿರುವುದರಿಂದ ಕ್ಯಾಂಟೀನ್‌ಗಳಿಗೆ ಆಹಾರ ತಯಾರಿಕೆ, ಸಾಗಣೆ, ಸಿಬ್ಬಂದಿ ಸಂಬಳ ಸೇರಿದಂತೆ ವಿವಿಧ ಖರ್ಚುಗಳನ್ನು ನಿಭಾಯಿಸುವುದು ಗುತ್ತಿಗೆದಾರರಿಗೆ ಸವಾಲಾಗಿದೆ. ಇನ್ನೂ ಕಾರ್ಮಿಕ ಇಲಾಖೆಯು ಕ್ಯಾಂಟೀನ್‌ಗೆ ಮೂರು ವರ್ಷಗಳಿಂದ ಸುಮಾರು 2.5 ಕೋಟಿ ರೂಪಾಯಿಯಷ್ಟು ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಮಹಾನಗರ ಪಾಲಿಕೆಯು ಒಂದು ವರ್ಷವಾದರೂ ಬಾಕಿ 1.5 ಕೋಟಿ ರೂ. ಬಿಲ್ ಪಾವತಿಸಿಲ್ಲ. ಬಿಲ್ ಪಾವತಿಸದಿದ್ದರೆ ಕ್ಯಾಂಟೀನ್ ನಿರ್ವಹಣೆ ಮಾಡುವುದಾದರೂ ಹೇಗೆ ಎಂದು ಗುತ್ತಿಗೆದಾರ ಮಯೂರ ಆದಿತ್ಯ ರೆಸಾರ್ಟ್‌ ಮಾಲೀಕ ಮಯೂರ ಮೋರೆ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೂ ಇಂದಿರಾ ಕ್ಯಾಂಟೀನ್‌ಗಳಿಗೆ ಮೂರೂ ಹೊತ್ತು ನಿತ್ಯ ತಲಾ 500 ಪ್ಲೇಟ್ ಆಹಾರ ಪೂರೈಕೆ ಮಾಡಬೇಕು. ಇದಕ್ಕಾಗಿ 50ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಆಹಾರ ತಯಾರಿಕೆಗೆ ಅಗತ್ಯ ಸಾಮಗ್ರಿ ಸೇರಿದಂತೆ ಹಲವು ವೆಚ್ಚಗಳು ದಿನೇ ದಿನೇ ಹೊರೆಯಾಗುತ್ತಿವೆ. ಅಲ್ಲದೇ ಇಂದಿರಾ ಕ್ಯಾಂಟೀನ್‌ ಗುತ್ತಿಗೆ ಪಡೆದಿರುವ ಮಯೂರ ಆದಿತ್ಯ ರೆಸಾರ್ಟ್ ಅವಧಿ ಮುಗಿದಿರುವುದರಿಂದ, ಕ್ಯಾಂಟೀನ್‌ ನಿರ್ವಹಣೆಗೆ 3 ವರ್ಷಗಳ ಅವಧಿಗೆ ಹೊಸದಾಗಿ ಟೆಂಡರ್ ಕರೆಯಲಾಗಿದೆ. ಆ ಪ್ರಕ್ರಿಯೆ ಮುಗಿಯುವವರೆಗೆ, ಮಯೂರದವರೇ ನಿರ್ವಹಣೆ ಮಾಡಲು 9 ತಿಂಗಳು ಅನುಮತಿ ನೀಡಲಾಗಿದೆ. ಆದರೆ ಸಕಾಲದಲ್ಲಿ ಬಾಕಿ‌ ಮೊತ್ತ ಬಿಡುಗಡೆ ಮಾಡದೇ ಇರುವುದರಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ ಅಂತಾರೇ ಗುತ್ತಿಗೆದಾರರು.

ಒಟ್ಟಿನಲ್ಲಿ ಮಹಾನಗರಕ್ಕೆ ಮಂಜೂರಾಗಿದ್ದ ಒಟ್ಟು 12 ಕ್ಯಾಂಟೀನ್‌ಗಳ ಪೈಕಿ, ಸದ್ಯ 9 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ ಧಾರವಾಡದಲ್ಲಿ ಎರಡು ಮತ್ತು ಹುಬ್ಬಳ್ಳಿಯ ನಿರ್ಮಾಣಗೊಳ್ಳಬೇಕಿದ್ದ ಒಂದು ಕ್ಯಾಂಟೀನ್‌ಗೆ ಪಾಲಿಕೆ ಜಾಗ ಗುರುತಿಸಿ ಕೊಡದಿದ್ದರಿಂದ, 3 ಕ್ಯಾಂಟೀನ್‌ಗಳು ರದ್ದಾಗಿದ್ದು, ಇರುವ ಕ್ಯಾಂಟಿನ್ ಬಿಲ್ ವಸೂಲಿಯಾಗದೇ ಇರುವುದೇ ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.

Edited By : Nagesh Gaonkar
Kshetra Samachara

Kshetra Samachara

20/05/2022 08:13 am

Cinque Terre

77.33 K

Cinque Terre

8

ಸಂಬಂಧಿತ ಸುದ್ದಿ