ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರ್ಮ್

ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಹೆಮ್ಮೆಯನ್ನು ವಿಶ್ವ ವಿಖ್ಯಾತ ಮಾಡುವಂತ ಮಹತ್ವದ ಕಾರ್ಯ.ಈ ಕಾರ್ಯದಿಂದ ಹುಬ್ಬಳ್ಳಿಗೆ ಮಾತ್ರವಲ್ಲದೆ

ಉತ್ತರ ಕರ್ನಾಟಕ ಭಾಗದ ವಾಣಿಜ್ಯ, ಸಾರ್ವಜನಿಕ ಚಟುವಟಿಕೆಗಳು ಮತ್ತಷ್ಟು ವೇಗವನ್ನು ಪಡೆದುಕೊಳ್ಳುತ್ತವೆ.ಈ ಯೋಜನೆ ಲಾಭ ಏನು ಅಷ್ಟಕ್ಕೂ ಯಾವುದು ಆ ಕಾರ್ಯ ಅಂತೀರಾ.

ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲಿಯೂ ಕೂಡ ಸಾಕಷ್ಟು ಜನಪ್ರೀಯತೆ ಪಡೆದಿರುವ ರೈಲ್ವೆ ಇಲಾಖೆ ಸಾಕಷ್ಟು ಜನಪರ ಕೆಲಸದ ಮೂಲಕ ಜನಮನ್ನಣೆ ಪಡೆದಿದೆ.

ಉತ್ತರ ಕರ್ನಾಟಕ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರ್ಮ್ ಸ್ಥಾಪನೆಗೊಳ್ಳುತ್ತಿರುವುದು ನಿಜಕ್ಕೂ ಖುಷಿಯ ಸಂಗತಿಯಾಗಿದೆ.

ನೈಋತ್ಯ ರೈಲ್ವೆ ವಲಯದಲ್ಲಿ ಇಂತಹದೊಂದು ಅಭೂತಪೂರ್ವ ಬದಲಾವಣೆಯಾಗುತ್ತಿರುವುದು ಇಲ್ಲಿನ ಅಭಿವೃದ್ಧಿಗೆ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಪುಷ್ಟಿ ನೀಡಲಿದೆ.

ಈಗಾಗಲೇ ರೈಲ್ವೆ ಸರಿಯಾದ ಸಮಯಕ್ಕೆ ನಿಲ್ದಾಣಕ್ಕೆ ಬರುವುದಿಲ್ಲ. ಅಲ್ಲದೇ ಪ್ಲಾಟ್ ಫಾರ್ಮ್ ಸಮಸ್ಯೆಗಳಿಂದ ರೈಲ್ವೆ ನಿಲ್ದಾಣದ ಹೊರವಲಯದ ನಿಲ್ದಾಣದಲ್ಲಿ ಸುಮಾರು ಗಂಟೆಗಳ ಕಾಲ ನಿಂತುಕೊಂಡು ಬಿಡುತ್ತದೆ‌.

ಇದರಿಂದ ಕೆಲಸ ಕಾರ್ಯಗಳಿಗೆ ಹೋಗಲು ತಡವಾಗುತ್ತದೆ.ಅಲ್ಲದೇ ರೈಲ್ವೆ ಪ್ರಯಾಣದಿಂದ ಕೆಲಸ ಹಿನ್ನಡೆ ಆಗಿತು ಎಂಬುವಂತ ಎಲ್ಲ ಆರೋಪಗಳಿಗೆ ಈಗ ನಿರ್ಮಾಣವಾಗುತ್ತಿರುವ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರ್ಮ್ ಫುಲ್ ಸ್ಟಾಪ್ ನೀಡಲಿದೆ‌.

ಅಲ್ಲದೇ ಈ ಪ್ಲಾಟ್ ಫಾರ್ಮ್ ನಿಂದ ಸಾಕಷ್ಟು ಸಮಯ ಹಾಗೂ ಅಭಿವೃದ್ಧಿಗೆ ಅಡಿಪಾಯ ಹಾಕಬಹುದಾಗಿದೆ.

ಸರಕು ಸಾಕಾಣಿಕೆಗೆ ಹಾಗೂ ಪಾರ್ಸಲ್ ಗೂಡ್ಸ್ ಸರ್ವಿಸ್ ಗೆ ಪ್ರತ್ಯೇಕ ನಿಲ್ದಾಣ ನಿರ್ಮಾಣ ಮಾಡಿರುವ ನೈಋತ್ಯ ರೈಲ್ವೆ ಇಲಾಖೆ

ಈಗ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಈ ಮಹತ್ವದ ಯೋಜನೆ ಕೈಗೊಂಡಿದೆ.ಇದರಿಂದ ಉತ್ತರ ಕರ್ನಾಟಕದ ವಾಣಿಜ್ಯ ವ್ಯವಹಾರ ಗರಿಗೇದರಲಿವೆ.

ಅಲ್ಲದೇ ಇನ್ನೆನ್ನೂ ಉತ್ತರ ಕರ್ನಾಟಕದ ಭಾಗದಲ್ಲಿ ಕೈಗಾರಿಕರಣಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಕಾರ್ಮಿಕರು ಪ್ರಯಾಣಿಸಲು ಕೂಡ ಈ ಪ್ಲಾಟ್ ಫಾರ್ಮ್ ಭವಿಷ್ಯತ್ತಿನಲ್ಲಿ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.

ಒಟ್ಟಿನಲ್ಲಿ ಈ ಹಿಂದೆ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರ್ಮ್ ಎಂಬ ಗೌರವಕ್ಕೆ ಪಾತ್ರವಾಗಿದ್ದ ಗೋರಕಪುರ ರೈಲ್ವೆ ಪ್ಲಾಟ್ ಫಾರ್ಮ್

ದಾಖಲೆಯನ್ನು ಹಿಂದಿಕ್ಕಿ 1500 ಮೀಟರ್ ಉದ್ದದ ಪ್ಲಾಟ್ ಫಾರ್ಮ್ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿರುವುದು ಉ.ಕ ಅಭಿವೃದ್ಧಿಗೆ ಧನಾತ್ಮಕ ಬೆಳವಣಿಗೆಗೆ ಸಾಕ್ಷಿಯಾಗಿದೆ.

Edited By : Manjunath H D
Kshetra Samachara

Kshetra Samachara

25/12/2020 03:46 pm

Cinque Terre

47.83 K

Cinque Terre

5

ಸಂಬಂಧಿತ ಸುದ್ದಿ