ಹುಬ್ಬಳ್ಳಿ: ಶುಕ್ರವಾರದಿಂದ ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ, ಜನರು ತಮ್ಮ ದಾಖಲಾತಿ ಪತ್ರಗಳ ನೋಂದಣಿ ಮಾಡಿಕೊಳ್ಳಲು ಬಂದಿದ್ದು, ಉಪನೋಂದಣಾಧಿಕಾರಿ ಮತ್ತು ಜನರ ನಡುವೆ ವಾಗ್ವಾದ ನಡದಿದೆ.
ನಗರದ ವಿದ್ಯಾನಗರದಲ್ಲರುವ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ, ನೂರಾರು ಜನರು ಹೆಚ್ಚಿನ ರೀತಿಯಲ್ಲಿ ಜಮಾಯಿಸಿ, ತಮ್ಮ ಆಸ್ತಿ ಪತ್ರ, ಸೈಡ್ ಪತ್ರ, ಮ್ಯಾರೇಜ್ ಸರ್ಟಿಫಿಕೇಟ್ ಹೀಗೆ ಹಲವಾರು ದಾಖಲಾತಿಗಳನ್ನು,
ನೋಂದಣಿ ಮಾಡಿಸಿಕೊಳ್ಳಲು ಬಂದಿದ್ದಾರೆ. ಆದರೆ ಸರ್ವರ್ ಸಮಸ್ಯೆ ಯಿಂದ ದಾಖಲಾತಿ ನೋಂದಣಿ ವಿಳಂಬ ಆಗುತ್ತಿದ್ದಂತೆ, ಉಪನೋಂದಣಾಧಿಕಾರಿ ಮತ್ತು ಸಾರ್ವಜನಿಕರ ನಡುವೆ,
ಮಾತಿನ ಚಕಮಕಿ ನಡೆದಿದೆ ಎಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಕರೆ ಮಾಡಿ ತಿಳಿಸಿದ ನಂತರ, ನಮ್ಮ ಸಿಂಬಂಧಿ ಸ್ಥಳಕ್ಕೆ ಹೋಗಿ ವಿಚಾರಿಸಿದಾಗ, ಉಪನೋಂದಣಾಧಿಕಾರಿ ಏನು ಹೇಳಿದ್ದಾರೆ ನೋಡಿ.....
ಬೆಳಗಿನ ಜಾವ ಸರ್ವರ್ ಹೆಚ್ಚಿಗೆ ಇರುವುದರಿಂದ ಎಲ್ಲರಿಗೂ ಬೆಳಗ್ಗೆ ಬನ್ನಿ ಎಂದು ಹೇಳುತ್ತಿರುವ ಅಧಿಕಾರಿಗಳು, ಇದಕ್ಕೆ ಸ್ಪಂದಿಸಿದ ಜನರು ಈ ಒಂದು ಕಾರಣಕ್ಕೆ ವಾಗ್ವಾದ ನಡದಿದೆ ಎಂದು, ಹೆಸರು ಹೇಳದ ಸಾರ್ವಜನಿಕರೊಬ್ಬರು ತಿಳಿಸಿದ್ದಾರೆ.
ಹಾಗೂ ಕೊರೊನಾ ಹಾವಳಿ ಭೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಒಬ್ಬಬ್ಬರಾಗಿ ಒಳಗೆ ಬನ್ನಿ ಎಂದಿದ್ದಕ್ಕೆ ಈ ರೀತಿಯ ಘಟನೆಯಾಗಿದೆ ಎಂದು ಬೇರೆ ಮೂಲಗಳಿಂದ ತಿಳಿದು ಬಂದಿದೆ......
Kshetra Samachara
24/12/2020 03:22 pm