ಕುಂದಗೋಳ : ಪಟ್ಟಣದ ಜನರ ಬಹು ದಿನ ಬೇಡಿಕೆಗಳಲ್ಲಿ ಒಂದಾದ ಮಸಾರಿ ಪ್ಲಾಟ್ ಬಳಿ ರೈಲ್ವೆ ಹಳಿಯ ಬ್ರಿಡ್ಜ್ ಕಾಮಗಾರಿಯನ್ನ ರೈಲ್ವೆ ಇಲಾಖೆ ಕೈಗತ್ತಿಕೊಂಡಿರುವುದು ಕುಂದಗೋಳ ಪಟ್ಟಣ ಸೇರಿ ಸುತ್ತ ಹಳ್ಳಿಗರಿಗೆ ಖುಷಿ ತಂದಿದೆ.
ಆದ್ರೆ, ಈ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬ ನಾಮ ಫಲಕ ಬಿಟ್ರೇ ಈ ರಸ್ತೆ ಬಂದ್ ಆದ್ರೆ ಇಲ್ಲಿನ ಜನರಿಗೆ ಬೇರೆ ಮಾರ್ಗ ಯಾವುದು ? ಎಂಬ ನಾಮಫಲಕ ಅಳವಡಿಸಿಲ್ಲ. ಈ ಕಾರಣ ನಿತ್ಯ ಸಂಚರಿಸುವ ವಾಹನ ಸವಾರರು ಪರ್ಯಾಯ ದಾರಿ ಹಿಡಿದರೇ. ಹೊಸದಾಗಿ ಬರೋ ಬೈಕ್ ಸವಾರರಿಗೆ ದಾರಿ ತಿಳಿಯದೆ ಬೈಕ್ ತಿರುಗಿಸಿ ಜನರನ್ನ ಪ್ರಶ್ನಿಸುವ ದೃಶ್ಯ ಕಂಡು ಬರುತ್ತಿವೆ.
ಇನ್ನು ಮಸಾರಿ ಪ್ಲಾಟ್ ಬಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ನಡೆದ ಕಾರಣ ಅಲ್ಲಾಪೂರ ಗ್ರಾಮದ ರಸ್ತೆ ಪಕ್ಕದಿಂದ ನೇರ ಎಪಿಎಂಸಿ ದಾರಿಗೆ ರೈತರ ಹೊಲದಲ್ಲಿ ರಸ್ತೆ ಮಾಡಿ ವಾಹನ ಸವಾರರಿಗೆ ಅನುಕೂಲ ಮಾಡಿದ್ದರೂ ರಸ್ತೆಯಲ್ಲಿ ಕೆಂಪು ಮಣ್ಣು ದೂಳು, ಕಲ್ಲುಗಳು ಲಘು ವಾಹನ ಸವಾರರಿಗೆ ತೊಂದರೆ ಮಾಡ್ತಿವೆ, ಈ ಕಾಮಗಾರಿ ಮುಗಿಯಲು ಹೆಚ್ಚಿನ ಅವಧಿ ಪಡೆಯುವ ಕಾರಣ ಈಗಿರುವ ರಸ್ತೆ ಸರಿಯಾಗಿ ಮಾಡುವಂತೆ ಜನ ಒತ್ತಾಯಿಸಿದ್ದಾರೆ.
Kshetra Samachara
18/12/2020 05:47 pm