ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಯಾಣಿಕರ ಸಂಖ್ಯೆ ಉಲ್ಬಣ: ಬಸ್ ಸಂಚಾರ ದ್ವಿಗುಣ

ಹುಬ್ಬಳ್ಳಿ: ಕೋವಿಡ್ ನಂತರದ ದಿನಗಳಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ದ್ವಿಮುಖವಾಗುತ್ತಿದೆ. ಈ ಹಿನ್ನಲೆಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ವಿವಿಧ ಮಾರ್ಗಗಳಲ್ಲಿ ಸ್ಲೀಪರ್‌, ವೋಲ್ವೋ ಮತ್ತು ರಾಜಹಂಸ ಐಷಾರಾಮಿ ಬಸ್‌ಗಳ ಸಂಚಾರ ಹೆಚ್ಚಿಸಲಾಗಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದ ಒಂಬತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ಪಿಂಪ್ರಿ, ಹೈದರಾಬಾದ್‌, ಸೊಲ್ಲಾಪುರ, ಮಂಗಳೂರು ಮತ್ತು ಬೆಂಗಳೂರಿಗೆ ಮತ್ತಷ್ಟು ಸ್ಲೀಪರ್‌, ವೋಲ್ವೋ ಮತ್ತು ರಾಜಹಂಸ ಬಸ್‌ಗಳ ಸಂಚಾರ ಪುನರಾರಂಭಿಸಲಾಗಿದೆ. ಈ ಬಸ್‌ಗಳು ಗೋಕುಲ ರಸ್ತೆಯ ಬಸ್‌ ನಿಲ್ದಾಣದಿಂದ ಹೊರಡುತ್ತವೆ.

ಹುಬ್ಬಳ್ಳಿ-ಪಿಂಪ್ರಿ (ರಾತ್ರಿ 9:00, 10:15), ಹುಬ್ಬಳ್ಳಿ-ಹೈದರಾಬಾದ್‌ (ರಾತ್ರಿ 8:00, 9:45), ಹುಬ್ಬಳ್ಳಿ-ಬೆಂಗಳೂರು (ರಾತ್ರಿ 8:30, 9:00, 11:00), ಹುಬ್ಬಳ್ಳಿ-ಸೊಲ್ಲಾಪುರ (ರಾತ್ರಿ 10:15), ಹುಬ್ಬಳ್ಳಿ- ಮಂಗಳೂರು (ರಾತ್ರಿ 8:45) ಕ್ಕೆ ಹೊರಡಲಿವೆ. ಈ ಬಸ್‌ಗಳಿಗೆ ಆನ್‌ಲೈನ್‌ ಮತ್ತು ಮುಂಗಡ ಬುಕ್ಕಿಂಗ್‌ ಕೌಂಟರ್‌ಗಳ ಮೂಲಕ ಆಸನಗಳನ್ನು ಕಾಯ್ದಿರಿಸುವ ಅವಕಾಶ ಕಲ್ಪಿಸಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

18/12/2020 03:53 pm

Cinque Terre

26.49 K

Cinque Terre

1

ಸಂಬಂಧಿತ ಸುದ್ದಿ