ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಂಚಾರವೇ ದುಸ್ಥರವಾದ ರಸ್ತೆ ಎಲ್ಲೇಡೆ ಕಲ್ಲು, ಮುಳ್ಳು, ಮಣ್ಣು !

ಕುಂದಗೋಳ : ಗ್ರಾಮೀಣ ಭಾಗದಲ್ಲಿನ ರಸ್ತೆಗಳ ಸಮಸ್ಯೆ ಎಷ್ಟರ ಮಟ್ಟಿಗೆ ರೈತರನ್ನು ಕಾಡುತ್ತಿದೆ ಎಂದರೆ ತಮ್ಮೂರಿನ ಹೊಲಗಳಿಗಷ್ಟೇ ಅಲ್ಲಾ ಗ್ರಾಮ ಪಂಚಾಯಿತಿಯನ್ನ ಸಂಪರ್ಕ ಮಾಡಲು ಇಲ್ಲಿನ ಜನ ನಿತ್ಯ ಹರಸಾಹಸ ಪಡಬೇಕು.

ಹೌದು ! ಇದು ಕುಂದಗೋಳ ತಾಲೂಕಿನ ಗುಡೇನಕಟ್ಟಿ ಅಲ್ಲಾಪುರ ಸಂಪರ್ಕ ಕಲ್ಪಿಸುವ ದೊಡ್ಡದಾರಿಯ ಕೇವಲ 5 ಕಿ.ಮೀ ರಸ್ತೆ, ಈಗಾಗಲೇ ಈ ರಸ್ತೆಯ ಅರ್ಧ ದಾರಿಗೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಅರ್ಧ ಗೊರಚು ಮಣ್ಣು ವೆಸ್ಟ್ ಹಾಕಿ ರಸ್ತೆ ಸರಿಪಡಿಸಿದ್ದು, ಇನ್ನರ್ಧ ರಸ್ತೆ ಅವ್ಯವಸ್ಥೆಯ ಕೂಪವಾಗಿದೆ.

ಈ ರಸ್ತೆ ತುಂಬಾ ಕಲ್ಲು, ಮಣ್ಣು, ಮುಳ್ಳು ಎದ್ದಿದ್ದು, ಮಳೆಗಾಲದಲ್ಲಿ ಟ್ರ್ಯಾಕ್ಟರ್ ಸಂಚರಿಸಿ ಬಿದ್ದ ತಗ್ಗು ಹಾಗೆ ಇವೆ. ಟ್ರ್ಯಾಕ್ಟರ್, ಎತ್ತು, ಚಕ್ಕಡಿ, ಗಳೆ ತೆಗೆದುಕೊಂಡು ಹೊಲಗಳಿಗೆ ತೆರಳುವ ರೈತರಿಗೆ ಮಳೆಗಾಲವಷ್ಟೇ ಅಲ್ಲಾ ಬೇಸಿಗೆಯಲ್ಲೂ ಸಂಚಾರ ಕಷ್ಟವಾಗಿದೆ. ಈ ಬಗ್ಗೆ ಅಲ್ಲಿನ ಗ್ರಾಮಸ್ಥರ ಮಾತನ್ನು ಕೇಳ್ಬಿಡಿ.

ಈ ರಸ್ತೆ ಕೇವಲ ಕೃಷಿ ಚಟುವಟಿಕೆಗೆ ಅಷ್ಟೇ ಅಲ್ಲದೆ ಈ ಗ್ರಾಮದ ಪಂಚಾಯಿತಿಗೆ ಸಂಪರ್ಕ ಕಲ್ಪಿಸುತ್ತಿದೆ. ಆದರೆ ಈ ಅವ್ಯವಸ್ಥೆ ಒಳಗೆ ವಾಹನಗಳನ್ನ ತೆಗೆದುಕೊಂಡು ಹೋಗುವುದು ಕಷ್ಟವಾದ ಜನ ಕುಂದಗೋಳ ತಲುಪಿ ಅಲ್ಲಿಂದ ಸುತ್ತ ಹಾಕಿ ಗುಡೇನಕಟ್ಟಿ ತಲುಪುತ್ತಾರೆ.

ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳು ಇನ್ನಾದರೂ ಗಮನಿಸಿ ಅನ್ನೋದೆ ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Nagesh Gaonkar
Kshetra Samachara

Kshetra Samachara

18/12/2020 12:54 pm

Cinque Terre

32.69 K

Cinque Terre

1

ಸಂಬಂಧಿತ ಸುದ್ದಿ