ನವಲಗುಂದ : ನೀವು ಗ್ರಾಮಗಳತ್ತ ಒಮ್ಮೆ ನೋಡಿದ್ರೆ ನಿಮಗೆ ಹೆಚ್ಚಾಗಿ ಕಂಡು ಬರುವ ಸಮಸ್ಯೆ ಅಂದ್ರೆ ಅದು ರಸ್ತೆ ಸಮಸ್ಯೆ, ಕೆಲವು ಗ್ರಾಮಗಳಲ್ಲಿ ರಸ್ತೆ ಹದಗೆಟ್ಟರೆ, ಕೆಲವೊಂದು ಗ್ರಾಮಗಳಲ್ಲಿ ಕಚ್ಚಾ ದಾರಿ ಇರುತ್ತೆ, ಅಯ್ಯೋ ಹದಗೆಟ್ಟ ರಸ್ತೆಗಿಂತ ಕಚ್ಚಾ ರಸ್ತೇನೆ ಎಷ್ಟೋ ವಾಸಿ ಅನ್ನೋ ಹಾಗಾಗಿದೆ ಈಗ ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮಸ್ತರದ್ದು.
ಹೌದು ನವಲಗುಂದದಿಂದ ಇಬ್ರಾಹಿಂಪುರ ಮಾರ್ಗವಾಗಿ ನೀವು ಹೊರಟರೆ ಕೇವಲ ಆರು ಕಿಲೋಮೀಟರ್ ದೂರದಲ್ಲಿರುವ ಗ್ರಾಮಕ್ಕೆ ಮುಟ್ಟಲು ಒಂದು ಗಂಟೆಗಳ ಕಾಲ ಸಮಯ ಹಿಡಿದರೂ ಆಶ್ಚರ್ಯವೇನೂ ಇಲ್ಲಾ, ಅಂದ್ರೆ ನೀವೇ ತಿಳಿದುಕೊಳ್ಳಿ ರಸ್ತೆ ಯಾವ ಪರಿಸ್ಥಿತಿಯತ್ತ ಮುಖ ಮಾಡಿದೆ ಅಂತಾ, ರಸ್ತೆ ಸರಿಪಡಿಸಿ ಅಂತಾ ಕೇಳಿದ್ರೆ ಮಳೆಗಾಲ ಮುಗಿಲಿ ಅಂತಾ ಕುಂಟು ನೆಪವನ್ನು ಹೇಳೋ ಅಧಿಕಾರಿಗಳು ಈಗ ಎಲ್ಲಿ ಹೋಗಿದ್ದಾರೆ ಅನ್ನೋದು ಇಂತಹ ರಸ್ತೆಯಲ್ಲಿ ಸಂಚಾರಿಸುವ ಅದೆಷ್ಟೋ ವಾಹನ ಸವಾರರ ಪ್ರಶ್ನೆಯಾಗಿದೆ. ಆದಷ್ಟು ಬೇಗ ಹದಗೆಟ್ಟ ರಸ್ತೆಯ ಬಗ್ಗೆ ಗಮನಹರಿಸಿ ಪರಿಹಾರ ನೀಡಲು ಅಧಿಕಾರಿಗಳು ಮುಂದಾಗಬೇಕಿದೆ.
Kshetra Samachara
16/12/2020 09:59 pm