ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
ಕುಂದಗೋಳ : ತಾಲೂಕಿನ ಶಿರೂರು ಗ್ರಾಮದಿಂದ ಕಮಡೊಳ್ಳಿಗೆ ಸಂಪರ್ಕ ಕಲ್ಪಿಸುವ ಕೇವಲ ನಾಲ್ಕು ಕಿ.ಮೀ ರಸ್ತೆ ಈ ಹಿಂದೆ ಅವ್ಯವಸ್ಥೆ ಹಾದಿ ಹಿಡಿದಿತ್ತು.
ರಸ್ತೆಯಲ್ಲಿ ತಗ್ಗು ಗುಂಡಿ ಬಿದ್ದು ನೀರು ಸಂಗ್ರಹದಿಂದ ಉಂಟಾಗುವ ತೊಂದರೆ ಬಗ್ಗೆ ಪಬ್ಲಿಕ್ ನೆಕ್ಸ್ಟ್ "ಗ್ರಾಮ ಗ್ರಾಮಗಳನ್ನ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳ ಅಭಿವೃದ್ಧಿ ಯಾವಾಗ ? ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಿಸಿತ್ತು.
ಈ ಸುದ್ದಿ ಪ್ರಕಟವಾದ ಕೆಲವೇ ದಿನಗಳಲ್ಲಿ ಶಿರೂರು ಮತ್ತು ಕಮಡೊಳ್ಳಿ ಗ್ರಾಮಸ್ಥರ ಸಂಚಾರದ ರಸ್ತೆ ಚಿತ್ರಣವೇ ಬದಲಾಗಿದೆ.
ಪಬ್ಲಿಕ್ ನೆಕ್ಸ್ಟ್ ಪ್ರಸಾರ ಮಾಡಿದ ಸುದ್ದಿ ಗಮನಿಸಿದ ಅಧಿಕಾರಿಗಳು ರಸ್ತೆಯನ್ನು ಡಾಂಬರೀಕರಣ ಮಾಡಿದ್ದಾರೆ.
ರಸ್ತೆಯಲ್ಲಿ ಬಿದ್ದಂತಹ ತಗ್ಗು ಗುಂಡಿಗಳನ್ನು ಮುಚ್ಚಿ ಸಾರ್ವಜನಿಕ ಸಂಚಾರಕ್ಕೆ ರಸ್ತೆ ಸರಿಪಡಿಸಲಾಗಿದೆ.
ಈ ಅಭಿವೃದ್ಧಿ ಕಾಮಗಾರಿಯನ್ನ ಸ್ವತಃ ಗ್ರಾಮಸ್ಥರೇ ವಿಡಿಯೋ ಮಾಡಿ ಪಬ್ಲಿಕ್ ನೆಕ್ಸ್ಟ್ ಗೆ ಕಳುಹಿಸಿ ಅಭಿನಂದನೆ ತಿಳಿಸಿದ್ದಾರೆ.
Kshetra Samachara
16/12/2020 12:26 pm