ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಚುನಾವಣೆಯಲ್ಲಿ ಅಧಿಕಾರಿಗಳು ಬ್ಯುಸಿ ಗ್ರಾಮದ ಅಳಲು ಅವರಿಗ್ಯಾಕೆ ಬಿಡಿ

ಕುಂದಗೋಳ : ಗ್ರಾಮ ಪಂಚಾಯಿತಿ ಇಲೆಕ್ಷನ್ ದಿನಾಂಕ ಘೋಷಣೆ ಆಗಿದ್ದೆ ತಡ ಎಲ್ಲಾ ಪಂಚಾಯಿತಿಗಳೂ ಈಗ ಚುನಾವಣಾ ಪ್ರಕ್ರಿಯೆಯಲ್ಲೇ ಬ್ಯುಸಿಯಾಗಿದ್ದು, ಈ ಗ್ರಾಮಗಳ ಪರಿಸ್ಥಿತಿ ಗಮನಿಸುವವರೇ ಇಲ್ಲವಾಗಿದೆ ನೋಡಿ.

ಇದೋ ಕುಂದಗೋಳ ತಾಲೂಕಿನ ಕೊನೆ ಗ್ರಾಮ ಕಡಪಟ್ಟಿ ಕಥೆ. ಈ ಊರಿನ ಶುದ್ಧ ನೀರಿನ ಘಟಕ ಕೆಟ್ಟು ನಿಂತು ಹತ್ತು ದಿನಗಳಾಯ್ತು ಇಂದಿಗೂ ದುರಸ್ತಿಯಾಗಿಲ್ಲ, ಇನ್ನು ಈ ಊರಿನ ಯಾವುದೇ ಬೀದಿಗೆ ಹೋದ್ರು ವಿದ್ಯುತ್ ವೈರ್ ಟ್ರಾಕ್ಟರ್, ಚಕ್ಕಡಿ ಇತರ ವಾಹನಗಳಿಗೆ ತಾಗುವ ಮಟ್ಟದಲ್ಲಿವೆ. ವಿದ್ಯುತ್ ಕಂಬಗಳಂತು ತುಕ್ಕು ಹಿಡಿದು ನೆಲಕ್ಕೆ ಅಪ್ಪಳಿಸುವ ಸಾಧ್ಯತೆ ಇವೆ.

ಚರಂಡಿಗಳು ಸಂಪೂರ್ಣ ಕಲುಷಿತ ನೀರು, ಪ್ಲಾಸ್ಟಿಕ್ ತ್ಯಾಜ್ಯ, ಕಸ ತುಂಬಿ ನೀರು ಹರಿಯುವಿಕೆ ಬಂದ್ ಆಗಿ ದುರ್ವಾಸನೆ ಜೊತೆ ಸೊಳ್ಳೆಗಳ ಕಾಟ ತಲೆದೋರಿದೆ. ಈ ಬಗ್ಗೆ ಇಂದಿಗೂ ಯಾವ ಜನಪ್ರತಿನಿಧಿಗಳಾಗಲಿ ಪಿಡಿಓ ಆಗಲಿ ಗ್ರಾಮವನ್ನ ತಲುಪಿ ಜನರ ಸಮಸ್ಯೆ ಆಲಿಸದೆ ಇರೋದು ಸಾರ್ವಜನಿಕ ಕೋಪಕ್ಕೆ ಕಾರಣವಾಗಿದೆ.

ಈ ಬಗ್ಗೆ ಅಧಿಕಾರಿಗಳು ಗಮನಿಸಿ ಕೇವಲ ಚುನಾವಣೆ ಅಷ್ಟೇ ಅಲ್ಲಾ ಸಾರ್ವಜನಿಕ ಕಷ್ಟಗಳನ್ನು ನೋಡಿ ಅನ್ನೋದೆ ಪಬ್ಲಿಕ್ ನೆಕ್ಸ್ಟ್ ಆಶಯ.

Edited By :
Kshetra Samachara

Kshetra Samachara

15/12/2020 04:49 pm

Cinque Terre

41.23 K

Cinque Terre

0

ಸಂಬಂಧಿತ ಸುದ್ದಿ