ಪಬ್ಲಿಕ್ ನೆಕ್ಸ್ಟ್ ಸ್ಪೆಶಲ್ ಸೆಗ್ಮೆಂಟ್
ಹುಬ್ಬಳ್ಳಿ: ಅದು ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪುಟ್ಟ ನಗರ...ಈ ನಗರದ ಸಮಸ್ಯೆ ಕೇಳಿದರೇ ನಿಜಕ್ಕೂ ನೀವು ಬೆಚ್ಚಿ ಬಿಳ್ತೀರಾ...ರಾತ್ರಿಯಾಗುತ್ತಿದ್ದಂತೆ ಕಣ್ಣು ತೆರೆಯುತ್ತವೇ ಅಕ್ರಮ ಚಟುವಟಿಕೆಗಳು.ಕೈಯಲ್ಲಿಯೇ ಜೀವನ ಹಿಡಿದುಕೊಂಡು ಜೀವನ ನಡೆಸುತ್ತಿದ್ದಾರೆ.ಇಲ್ಲಿಯ ಜನರು.ಅಷ್ಟಕ್ಕೂ ಯಾವುದು ಆ ನಗರ...?ಅಲ್ಲಿ ನಡೆತಿರೋದಾದರೂ ಏನೂ ಅಂತೀರಾ ಹಾಗಿದ್ದೇರೆ ನೋಡಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಸ್ಪೋಟಕ ಸುದ್ದಿ...
ಪ್ರೀಯ ವೀಕ್ಷಕರೇ ನೀವು ಸರ್ವೆ ಸಾಮಾನ್ಯವಾಗಿ ಒಂದು ಹಳ್ಳಿ ಹಾಗೂ ನಗರವನ್ನು ನೋಡಿರ್ತೀ ರಾ ಆದರೇ ಇಲ್ಲಿರುವ ಸಮಸ್ಯೆ ಅಂತೂ ಬೇರಾವ ಹಳ್ಳಿಯಲ್ಲಿಯೂ ಇರಲು ಸಾಧ್ಯವೇ ಇಲ್ಲ.
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಾಮನಗರದಲ್ಲಿ ಸಾಕಷ್ಟು ಸಮಸ್ಯೆಗಳು ತಲೆದೂರಿದ್ದು,ಸಮಸ್ಯೆಗಳಂತೂ ಹೇಳ ತೀರದಾಗಿದೆ.ಧಾರವಾಡ ಜಿಲ್ಲೆಯಲ್ಲಿದೆ ಜ್ವಲಂತ ಸಮಸ್ಯೆಗಳ ತಾಣವಾಗಿರುವ ರಾಮನಗರ ಸಾಕಷ್ಟು ಸರ ಮಾಲೆಯಲ್ಲಿಯೇ ಜೀವನ ನಡೆಸಬೇಕಿದೆ.
ಇಲ್ಲಿ ಮೂಲಭೂತ ಸೌಕರ್ಯಗಳಂತೂ ಇಲ್ಲವೇ ಇಲ್ಲ. ಕೆಸರು ಗದ್ದೆಯಂತಾದ ರಸ್ತೆಗಳು ಈ ರಸ್ತೆಗಳನ್ನು ನೋಡಿದರೇ ನಿಜಕ್ಕೂ ಇವು ರಸ್ತೆಗಳಾ ಅಥವಾ ಭತ್ತದ ಗದ್ದೆಗಳಾ ಎಂಬುವಂತಿವೆ.ಕಾಂಕ್ರೀಟ್ ಹಾಗೂ ಡಾಂಬರು ಕಾಣದ ರಸ್ತೆಗಳು ಚರಂಡಿಯಿಲ್ಲದ ವಠಾರ.ಅಷ್ಟೇ ಅಲ್ಲ ಈ ನಗರದಲ್ಲಿ ಯಾರಿಗೇ ಏನಾದರೂ ಆದ್ರೆ ಒಂದು ಚಿಕ್ಕ ಆಸ್ಪತ್ರೆ ಕೂಡ ಇಲ್ಲ.
ಅರೇ ಇಷ್ಟಕ್ಕೆ ಮುಗಿತು ಅಂದುಕೊಂಡ್ರಾ..ಇಲ್ಲಿನ ಸಾರ್ವಜನರಿಕರು ಕಂಡು ಕೇಳರಿಯದ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಹೆಸರಲ್ಲಿ ಮಾತ್ರ ರಾಮನಗರ.
ಆದ್ರೇ ಇಲ್ಲಿದೇ ರಾವಣ ಮುಖಗಳ ಪೊಕರಿಗಳ ಹಾವಳಿ ಎಲ್ಲೆಂದರಲ್ಲಿ ಕುಡಿದು.ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ.ಈ ಕುರಿತು ಮಹಿಳೆಯರು ಮಾಧ್ಯಮದ ಮುಂದೆ ತಮ್ಮ ಕಣ್ಣೀರನ್ನು ಕೂಡ ಹಾಕಿದ್ದಾರೆ.
ಆಶ್ರಯ ಯೋಜನೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.ಆದರೆ ಇಲ್ಲಿರುವ ಜನರು ಮಾತ್ರ ಏನಾಗುತ್ತದೆಯೋ ಎಂಬುವಂತ ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದಾರೆ..
ಇನ್ನೂ ಇಲ್ಲಿಯ ಜನರು ಅನಾರೋಗ್ಯದಿಂದ ನರಳುತ್ತಿದ್ದರೂ ಕೂಡ ಸರಿಯಾದ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಅಲ್ಲದೆ ಸರಿಯಾದ ಸಾರಿಗೆ ವ್ಯವಸ್ಥೆ ಕೂಡ ಇಲ್ಲದಿರುವುದು ಸಾರ್ವಜನಿಕ ಸಮಸ್ಯೆಗಳಿಗೆ ಸಾಕ್ಷಿಯಾಗಿದೆ.
ಅಲ್ಲದೇ ಅದೆಷ್ಟೋ ವರ್ಷ ಕಳೆದರು ಮೂಲಭೂತ ಸೌಕರ್ಯಗಳೇ ಇಲ್ಲವಾಗಿದ್ದು,ಮಹಿಳೆಯರಿಗಂತೂ ಸುರಕ್ಷತೆಯೇ ಇಲ್ಲದಂತಾಗಿದೆ. ಕೈಯಲ್ಲಿ ಜೀವ ಹಿಡಿದುಕೊಂಡೇ ಜೀವನ ನಡೆಸಬೇಕಿದೆ.ಇನ್ನೂ ವಿಪರ್ಯಾಸವೆಂದರೆ ಪೊಲೀಸ್ ಗಸ್ತು ಬಂದಿದ್ದೇ ನೋಡಿಲ್ವಂತೆ ಈ ಜನರು.
ಇನ್ನೂ ಈ ಕುರಿತು ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಲಾಗಿದ್ದು,ಅವರು ಏನ ಹೇಳ್ತಾರೇ ನೀವೆ ನೋಡಿ..
ಒಟ್ಟಿನಲ್ಲಿ ಇಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಜನರ ಸಮಸ್ಯೆಗಳಿಗೆ ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಜರುಗಿಸಿ ಸಾರ್ವಜನಿಕ ಹಿತ ಕಾಪಾಡಬೇಕು ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ..
Kshetra Samachara
15/12/2020 09:21 am