ಕಲಘಟಗಿ: ತಾಲೂಕಿನ ಜನತೆಯ ಬಹು ದಿನಗಳ ಬೇಡಿಕೆಯಾಗಿರುವ,ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ (ಡಿಪೋ) ಘಟಕದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು,ಶೀಘ್ರ ಕಾರ್ಯಾರಂಭ ಮಾಡುವುದೇ ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಜಾಗೆಯಲ್ಲಿ ಅಂದಾಜು 5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನ ಬಸ್ ಘಟಕ ಸಿದ್ಧವಾಗಿದೆ.ತಾಲೂಕು 86 ಗ್ರಾಮಗಳನ್ನು ಹೊಂದಿದ್ದು,ಸಾರಿಗೆ ಸಮಸ್ಯೆ ಇಲ್ಲಿನ ಜನರನ್ನು ಹಾಗೂ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಬಹುದಿನಗಳ ಕನಸಾಗಿದ್ದ ಬಸ್ ಘಟಕ (ಡಿಪೋ) ಪ್ರಾರಂಭವಾದರೆ,ತಾಲೂಕಿನ ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆ ನಿಗಲಿದೆ.
ಕೊರೋನಾ ಹಾಗೂ ಲಾಕ್ ಡೌನ್ ಕಾರಣ ನೂತನ ಘಟಕದ ಉದ್ಘಾಟನೆ ವಿಳಂಬವಾಗಿತ್ತು.ಈಗ ಬಸ್ ಘಟಕದ ಕಾರ್ಯ ಪೂರ್ಣವಾಗಿದ್ದು, ಶೀಘ್ರ ನೂತನ ಬಸ್ ಘಟಕ್ ಲೋಕಾರ್ಪಣೆ ಯಾಗುವುದೇ ಎಂದು ತಾಲೂಕಿನ ಜನರ ನಿರೀಕ್ಷೆಯಾಗಿದೆ.
ಇನ್ನಾದರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಶೀಘ್ರ ಕಲಘಟಗಿ ನೂತನ ಬಸ್ ಘಟಕದ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್ ಮಾಡುವರೇ ಎಂಬುದನ್ನು ಕಾಯದ್ದು ನೋಡ ಬೇಕಿದೆ.
Kshetra Samachara
14/12/2020 02:15 pm