ಅಣ್ಣಿಗೇರಿ : ಇಲ್ಲೋಂದು ಊರೈತಿ ಆ ಊರ ಒಳಗಿನ ಪರಿಸ್ಥಿತಿ ನೋಡಿದ್ರೆ. ಈ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅನ್ನಿಸಿಕೊಂಡವರು ಅದಾರೋ ? ಇಲ್ವೋ ? ಎಂಬ ಸಂಶಯವಾಗಿ ಜನರನ್ನ ಕಾಡುತ್ತಿದೆ, ಅಷ್ಟರ ಮಟ್ಟಿಗೆ ಸಮಸ್ಯೆ ಬೆನ್ನತ್ತಿ ಇಲ್ಲಿನ ಜನರನ್ನ ಕಷ್ಟಕ್ಕೆ ತಳ್ಳಿದೆ.
ಈ ಊರು ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮ ಇಲ್ಲಿನ ಜನತಾ ಪ್ಲಾಟ್ ನೀವೂ ಹೋದ್ರೆ ಕಥೆ ಮುಗಿತು. ಅಲ್ಲಿನ ಅನೈರ್ಮಲ್ಯ, ಕೊಳಚೆ, ದುರ್ವಾಸನೆ ಸೊಳ್ಳೆ ನಿಮ್ಮನ್ನು ಓಡಿಸಿ ಬಿಡುತ್ತೆ ನೋಡಿ.
ಇಂತಹ ಪರಿಸ್ಥಿತಿ ಒಳಗಡೆ ಸತತ 6 ವರ್ಷದಿಂದ ಇಲ್ಲಿನ ನಿವಾಸಿಗಳು ನಿತ್ಯ ಬದುಕು ಸವೆಸಿ ಸಣ್ಣಗಾಗುತಿದ್ದರೂ, ಇಂದಿಗೂ ಯಾರು ಈ ಅವ್ಯವಸ್ಥೆ ಬಗ್ಗೆ ತುಸು ಕಾಳಜಿ ತೋರಿಲ್ಲ, ಈ ಜನತಾ ಪ್ಲಾಟ್ ಮನೆ ಮುಂದಿನ ಬೀದಿಗಳು ಅಕ್ಷರಶಃ ಹಳ್ಳದಂತೆ ಗೋಚರಿಸುತ್ತಿದ್ದು, ಈ ಬೇಸಿಗೆಯಲ್ಲೂ ಓಣಿಗಳಲ್ಲಿ ಮೊಣಕಾಲುದ್ದ ನೀರು ಸಂಗ್ರಹವಾಗಿದೆ.
ಈ ಬಗ್ಗೆ ಅಲ್ಲಿನ ಗ್ರಾಮಸ್ಥರು ಪಿಡಿಓ, ಸೇರಿದಂತೆ ತಾಲೂಕು ಜಿಲ್ಲಾ ಪಂಚಾಯಿತಿ ಅಷ್ಟೇ ಯಾಕೆ ಈ ಜನಪ್ರತಿನಿಧಿಗಳು ಗಮನಕ್ಕೆ ತಂದ್ರೂ ಈ ರಸ್ತೆ ಅಭಿವೃದ್ಧಿ ಕಂಡಿಲ್ಲ. ಇನ್ನಾರ್ದೂ ಈ ಬಗ್ಗೆ ಜನಪ್ರತಿನಿಧಿಗಳು ಗಮನಿಸಿ ಎಂಬುದು ಪಬ್ಲಿಕ್ ನೆಕ್ಷ್ಟ ಆಶಯ.
Kshetra Samachara
12/12/2020 07:39 pm