ಅಣ್ಣಿಗೇರಿ : ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ಇಲಾಖೆ ಸಿಬ್ಬಂದಿ ಹಮ್ಮಿಕೊಂಡ ಪ್ರತಿಭಟನೆ ಎರಡನೇ ದಿನಕ್ಕೆ ಮುಂದುವರಿದ ಪರಿಣಾಮ ಸಾರ್ವಜನಿಕರು ತಮ್ಮ ಪ್ರಯಾಣಕ್ಕಾಗಿ ಪರದಾಡುವ ಸ್ಥಿತಿ ಕಂಡು ಬರುತ್ತಿದೆ.
ಹತ್ತು ರೂಪಾಯಿ ಪ್ರಯಾಣಕ್ಕಾಗಿ ನೂರು ರೂಪಾಯಿ ನೀಡಿ ತಾವು ತಲುಪಬೇಕಾದ ಸ್ಥಳಕ್ಕೆ ತಲುಪುತ್ತಿರುವುದು ಮನಕಲಕುವಂತೆ ಕಾಣುತ್ತಿದೆ.
ಸರ್ಕಾರಿ ಬಸ್ ಇಲ್ಲದೇ ಇದ್ದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳ ಕಡೆ ದುಪ್ಪಟ್ಟು ಹಣ ನೀಡಿ ಮುಖ ಮಾಡುತ್ತಿದ್ದಾರೆ.
ಖಾಸಗಿ ವಾಹನಗಳ ಮಾಲಿಕರು ಹಬ್ಬದ ರೀತಿಯಲ್ಲಿ ತಮ್ಮ ವಾಹನವನ್ನು ಖುಷಿ ಖುಷಿಯಾಗಿ ಚಲಾವಣೆ ಮಾಡುತ್ತಿದ್ದಾರೆ.
Kshetra Samachara
12/12/2020 01:25 pm