ಕುಂದಗೋಳ : ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಹೊತ್ತು, ಸಾರಿಗೆ ನೌಕರರು ಕೈಗೊಂಡಿರುವ ಮುಷ್ಕರ ಎರಡನೇ ದಿನ ಕಾಲಿಟ್ಟಿದೆ. ಈ ಸಾರಿಗೆ ಮುಷ್ಕರದ ಪರಿಣಾಮ ಕುಂದಗೋಳ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ.
ಈ ಸಾರಿಗೆ ಮುಷ್ಕರ ಅರಿಯದೆ ಹುಬ್ಬಳ್ಳಿಯಿಂದ ಖಾಸಗಿ ವಾಹನಗಳ ಮೂಲಕ ಆಗಮಿಸಿದ ಕೆಲ ಪ್ರಯಾಣಿಕರಿಗೆ ಕುಂದಗೋಳದಿಂದ ಮುಂದೆ ತಮ್ಮೂರಿಗೆ ತೆರಳುವುದು ಕಷ್ಟವಾಗಿದೆ. ಈ ಕಾರಣ ತಮ್ಮ ಮನೆಗಳಿಗೆ ಕೆರೆ ಮಾಡಿ ವಾಹನ ತರಲು ಹೇಳಿದ್ದಾರೆ. ಆ ಪ್ರಯಾಣಿಕರ ಮಾತೇನು ಕೇಳ್ಬಿಡಿ.
ಈ ಸಾರಿಗೆ ಮುಷ್ಕರದ ಲಾಭ ಪಡೆದ ಖಾಸಗಿ ಟಿಂಪೋ, ಟಾಟಾಎಸ್ ಪ್ಯಾಸೇಂಜರ್ ವಾಹನ, ಆಟೋಗಳು ಕುಂದಗೋಳ ಬಸ್ ನಿಲ್ದಾಣ ಪಕ್ಕ ನಿಂತು ಪ್ರಯಾಣಿಕರನ್ನ ಅವರ ಊರಿಗೆ ತಲುಪಿಸುವ ಕಾರ್ಯಕ್ಕೆ ಎಸ್ ಎಂದಿದ್ದು, ಸಾರಿಗೆ ದರಕ್ಕಿಂತ ತುಸು ಹೆಚ್ಚಿಗೆ ಹಣ ಪಡೆಯುತ್ತಿದ್ದಾರೆ.
Kshetra Samachara
12/12/2020 12:37 pm