ಹುಬ್ಬಳ್ಳಿ : ಲಾಕ್ ಡೌನ್ ಬಳಿಕ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಿಂದ 10 ವಿಶೇಷ ರೈಲುಗಳು ಸಂಚರಿಸಲಿದ್ದು ವೇಳಾಪಟ್ಟಿ ಪ್ರಕಟಗೊಂಡಿದೆ.
ಕರ್ನಾಟಕ ಮತ್ತು ಇತರ ರಾಜ್ಯಗಳ ವಿವಿಧ ಪ್ರದೇಶಗಳಿಗೆ ರೈಲುಗಳು ಸಂಚಾರ ನಡೆಸಲಿವೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸಾಮಾನ್ಯ ರೈಲುಗಳ ಸಂಚಾರ ಸ್ಥಗಿತವಾಗಿದೆ.
ಆದ್ದರಿಂದ, ಬೇಡಿಕೆ ಇರುವ ಮಾರ್ಗದಲ್ಲಿ ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.
ನೈಋತ್ಯ ರೈಲ್ವೆ ಪ್ರಾಯೋಗಿಕವಾಗಿ 10 ದಿನಗಳ ಕಾಲ ರೈಲು ಓಡಿಸುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತದೆ.
ರೈಲುಗಳ ವಿವರಗಳು
ರೈಲು ನಂಬರ್ 07322 : ಧಾರವಾಡ-ಸೊಲ್ಹಾಪುರ ನಡುವೆ ಪ್ರತಿದಿನ. ಧಾರವಾಡದಿಂದ 17:40ಕ್ಕೆ ಹೊರಟು 3.30ಕ್ಕೆ ತಲುಪಲಿದೆ. ಉಣಕಲ್, ನವಲೂರು, ಮಿಂಚರಾಳ, ನಿಂಬಾಳ, ತಡವಾಳ ಹೊರತುಪಡಿಸಿ ಉಳಿದ ಕಡೆ ನಿಲುಗಡೆ ಇದೆ.
ರೈಲು ನಂಬರ್ 07321 : ಸೊಲ್ಹಾಪುರ-ಧಾರವಾಡ ನಡುವೆ ಪ್ರತಿದಿನ ಸಂಚಾರ. 00:40 ಹೊರಡಲಿದ್ದು, 11:05ಕ್ಕೆ ಆಗಮಿಸಲಿದೆ. ತಡವಾಳ, ನಿಂಬಾಳ, ಮಿಂಚನಾಳ, ನವಲೂರು, ಉಣಕಲ್ ಹೊರತುಪಡಿಸಿ ಉಳಿದ ಕಡೆ ನಿಲುಗಡೆ.
ಹುಬ್ಬಳ್ಳಿ-ಸೊಲ್ಹಾಪುರ
ರೈಲು ನಂಬರ್ 07332 : ಹುಬ್ಬಳ್ಳಿ-ಸೊಲ್ಹಾಪುರ ನಡುವೆ ಪ್ರತಿದಿನ ಸಂಚಾರ ನಡೆಸಲಿದೆ. 13:00 ಗಂಟೆಗೆ ಹೊರಡಲಿದ್ದು, 22:40ಕ್ಕೆ ತಲುಪಲಿದೆ.
ಸೊಲ್ಹಾಪುರ-ಹುಬ್ಬಳ್ಳಿ ನಡುವೆ 07331 ರೈಲು ಪ್ರತಿದಿನ ಸಂಚಾರ ನಡೆಸಲಿದೆ. 4:45ಕ್ಕೆ ಹೊರಡಲಿದ್ದು, 15:15ಕ್ಕೆ ತಲುಪಲಿದೆ.
ಹುಬ್ಬಳ್ಳಿ-ಬಳ್ಳಾರಿ ರೈಲು
07337 ರೈಲು ಪ್ರತಿ ದಿನ ಹುಬ್ಬಳ್ಳಿ-ಬಳ್ಳಾರಿ ನಡುವೆ ಸಂಚಾರ ನಡೆಸಲಿದೆ. 8:00 ಗಂಟೆಗೆ ಹೊರಡಲಿದ್ದು, 13:00 ಗಂಟೆಗೆ ತಲುಪಲಿದೆ. ಕುಸುಗಲ್, ಹೆಬಸೂರ, ಅಣ್ಣಿಗೇರಿ, ಹುಲಕೋಟಿ, ಗದಗ, ಕೊಪ್ಪಳ, ಗಿಣಿಗೇರಾ ಮುಂತಾದ ಕಡೆ ನಿಲುಗಡೆ ಇದೆ.
07338 ಬಳ್ಳಾರಿ-ಹುಬ್ಬಳ್ಳಿ ನಡುವೆ ಪ್ರತಿದಿನ ಸಂಚಾರ ನಡೆಸಲಿದೆ. 16:00ಕ್ಕೆ ಹೊರಟು, 21:00ಕ್ಕೆ ತಲುಪಲಿದೆ.
Kshetra Samachara
11/12/2020 08:20 am