ಕಲಘಟಗಿ: ಪಟ್ಟಣದ ಐತಿಹಾಸಿಕ ಮೃತ್ಯುಂಜಯ ಕೆರೆ ಅಭಿವೃದ್ಧಿ ಕಾಣದೇ ಗಿಡಗಂಟಿಗಳು ಬೆಳೆದು ಕೆರೆ ಒಡ್ಡಿನ ಕಲ್ಲುಗಳು ಕಿತ್ತು ಕೆರೆ ಹಾಳಾಗುತ್ತಿದೆ.
ಪಟ್ಟಣದ ಮೃತ್ಯುಂಜ್ಯಯ (ದೊಡ್ಡ,ರುಸ್ತುಂ) ಕೆರೆಯ ಅಭಿವೃದ್ಧಿಗೆ ಹಲವು ವರ್ಷಗಳ ಹಿಂದೆ ಸುಮಾರು ೮೦ ಲಕ್ಷ ರೂ.ಸರಕಾರದ ಅನುದಾನ ಬಳಸಿ,ಅರೆ ಬರೆ ಅಭಿವೃದ್ಧಿ ಮಾಡಿ ಬಿಡಲಾಗಿದ್ದು,ಈಗ ಕೆರೆಯ ನಿರ್ವಹಣೆ ಇಲ್ಲದೆ,ಕಸ ಗಿಡಗಂಟಿ ಬೆಳೆದು ಕೆರೆ ಅಂದವನ್ನು ಕಳೆದುಕೊಳ್ಳುತ್ತಿದೆ.
ಫಿಚ್ಚಿಂಗ್ ಕಲ್ಲುಗಳ್ನು ಸರಿಯಾಗಿ ಹೊಂದಿಸದೆ ಕೆರೆಯ ಒಡ್ಡು ಕುಸಿದು ಬಿದ್ದು, ಕೆರೆ ದಂಡೆ ಸಡಿಲಗೊಂಡಿದೆ.ಸುತ್ತಲಿನ ಕಬ್ಬಿಣದ ಸರಳುಗಳು ಹಾಗೂ ತಡೆಗೋಡೆ ವಾಲುತ್ತಿದೆ,ಪುಟ್ ಪಾತ್ ಕುಸಿಯುತ್ತಿದೆ.
ಕೆರೆಯ ಸೌಂದರೀಕರಣಗೊಳಿಸುವ ನೆಪದಲ್ಲಿ ಕೆರೆಯ ಮಧ್ಯದಲ್ಲಿ ಮಣ್ಣಿನ ಗುಡ್ಡೆ ಹಾಕಿ ನಡುಗಡ್ಡೆ ನಿರ್ಮಾಣದಿಂದ ನೀರಿನ ಸಂಗ್ರಹ
ಕಡಿಮೆಯಾಗಿದೆ.
ತ್ಯಾಜ್ಯವನ್ನು ಎಸೆಯಲಾಗುತ್ತಿದ್ದು ಕೆರೆ ಮಲೀನವಾಗುತ್ತಿದೆ.ಕೆರೆಯ ಸುತ್ತಮುತ್ತ ಬೆಳೆದ ಕಸ ಸ್ವಚ್ಚತೆಮಾಡಿ ಕೆರೆ ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎನ್ನುತ್ತಾರೆ ಪಟ್ಟಣದ ನಿವಾಸಿ ಕಿರಣ ಅಳಗವಾಡಿ.
ಕೆರೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಪಡಿಸದೆ ಇರುವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಇಲಾಖೆ ಕೆರೆಯ ಅಭಿವೃದ್ಧಿ ಮಾಡಿ ಕೆರೆಗೆ ಕಾಯಕಲ್ಪ ಒದಗಿಸುವ ಕೆಲಸವನ್ನು ಮಾಡುವುದೇ ಎಂಬುದನ್ನು ಕಾದು ನೋಡ ಬೇಕಿದೆ.
Kshetra Samachara
10/12/2020 06:54 pm