ಅಣ್ಣಿಗೇರಿ : ಇಲ್ಲೊಂದು ಗ್ರಾಮಕ್ಕೆ ಮಂಜೂರಾದ ರಸ್ತೆ ಕಥೆ ಕೇಳಿದ್ರೆ, ಸ್ವಾಮಿ ನಮ್ಗೆ ರಸ್ತೆ ಬೇಡಾ ಬಿಡಿ ಹಾಗೇ ನಡೆದಾಡುತ್ತೇವೆ ಎಂಬ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಹೌದು ! ಇದೇ ಅಣ್ಣಿಗೇರಿ ತಾಲೂಕಿನ ಕೊಂಡಿಕೊಪ್ಪ ಗ್ರಾಮದ ದೇಶಪಾಂಡೆ ನಗರಕ್ಕೆ 2018 ರಲ್ಲಿ ಅನುಮೋದನೆ ಆದ ರಸ್ತೆಗೆ ಇಂದಿಗೂ ಅಭಿವೃದ್ಧಿ ಭಾಗ್ಯ ಕೂಡಿ ಬಂದಿಲ್ಲಾ.
ಸ್ಥಳೀಯ ನಿವಾಸಿಗಳಿಗೆ ನಿತ್ಯ ಸಂಚಾರ ಹಾಗೂ ಟ್ರ್ಯಾಕ್ಟರ್ ಸೇರಿದಂತೆ ಇತರ ವಾಹನಗಳು ಓಡಾಡುವುದು ದುಸ್ತರವಾಗಿದೆ.
2019 ರಲ್ಲಿ ಕಾಂಕ್ರೀಟ್ ರಸ್ತೆ ಆರಂಭಿಸುವ ನಿರ್ಧಾರ ಮಾಡಿ ಅಧಿಕಾರಿಗಳು ಮತ್ತೆ ಹಿಂದೆ ಸರಿದಿದ್ದು, ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸತತ ಮೂರು ವರ್ಷಗಳ ಕಾಲ ಈ ರಸ್ತೆ ಅನೈರ್ಮಲ್ಯ, ಕೊಳಚೆ ಬಗ್ಗೆ ಸಾರ್ವಜನಿಕರು ಅಧಿಕಾರಿಗಳಿಗೆ ಮನವಿ ಮಾಡಿ ಬೇಸತ್ತಿದ್ದಾರೆ. ಈ ರಸ್ತೆಗೆ ಇನ್ನಾರ್ದೂ ಅಭಿವೃದ್ಧಿ ಭಾಗ್ಯ ಕೂಡಿ ಬರುತ್ತಾ ಕಾದು ನೋಡಬೇಕಿದೆ.
Kshetra Samachara
10/12/2020 02:21 pm