ಕುಂದಗೋಳ : ಜಲ ಮೂಲಗಳ ಆಧಾರದ ಮೇಲೆ ನಿಮ್ಮೂರಿಗೆ 24/7 ನೀರಿನ ಸೌಕರ್ಯ ಒದಗಿಸುವ ಗುರಿಯನ್ನು ಜಲ ಜೀವನ್ ಮಿಷನ್ ಯೋಜನೆಯಡಿ ನಾವು ರೂಪಿಸುತ್ತಿದ್ದೇವೆ. ಕೇವಲ ನೀರಷ್ಟೇ ಅಲ್ಲಾ ಕ್ರಿಯಾಶೀಲ ನೀರಿನ ಸೌಲಭ್ಯ ಒದಗಿಸಲು ಚಿಂತನೆ ನಡೆದಿದ್ದು, ಆಯಾ ಗ್ರಾಮದ ನೀರಿನ ಮೂಲಗಳ ಮೇಲೆ ಜನರಿಗೆ ನೀರು ದೊರಕುತ್ತದೆ. ಕೆಲ ಗ್ರಾಮಗಳಿಗೆ 4-5 ತಾಸು ನೀರು ಸಿಗಬಹುದು ಆದರೆ ಪ್ರತಿ ಮನುಷ್ಯನಿಗೆ ದೈನಂದಿನ ಜೀವನಕ್ಕೆ ಕನಿಷ್ಠ ಪಕ್ಷ 55 ಲೀಟರ್ ನೀರನ್ನು ನಾವು ಒದಗಿಸಲು ಯೋಜನೆ ರೂಪಿಸುತ್ತಿದ್ದೇವೆ ಎಂದು ಪಂಚಾಯತ್ ಅಧಿಕಾರಿ ಮಂಜುಳಾ ಹೂಗಾರ ಹೇಳಿದರು.
ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳಿಗೆ ಸುರಕ್ಷಿತ ಮತ್ತು ನೈರ್ಮಲ್ಯ ಕುಡಿಯುವ ನೀರಿನ ಯೋಜನೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ ನಿಮಗೆ ಕುಡಿಯುವ ನೀರು ತಲುಪಿಸಲು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸಹಕಾದಲ್ಲೇ ಕಾರ್ಯ ನಿರ್ವಹಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗುಡೇನಕಟ್ಟಿ ಹಾಗೂ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು
Kshetra Samachara
10/12/2020 12:41 pm