ಕುಂದಗೋಳ : ಈ ಊರಿಗೆ ಯಾವಾಗ ನಳ ನಲ್ಲಿಗಳು ಶುದ್ಧ ನೀರಿನ ಘಟಕಗಳ ತಲುಪಿದವೋ ಅಂದಿನಿಂದ ಪುರಾತನ ಕಾಲದಿಂದ ಜನರ ದಣಿವನ್ನ ನೀಗಿಸಿದ ಕೆರೆ ಬಾವಿಗಳು ಕಣ್ಮರೆಯಾಗುತ್ತಲೆ ಮುಂದುವರೆಯುತ್ತಿವೆ.
ಈಗಾಗಲೇ ಕುಂದಗೋಳ ತಾಲೂಕಿನ ಬಹುತೇಕ ಹಳ್ಳಿಗಳ ಕೆರೆಗಳು ಅನೈರ್ಮಲ್ಯ ತುಂಬಿ ಕುಡುಕರು ಅಡ್ಡೆಯಾದ್ರೆ. ಇಲ್ಲೊಂದು ಗ್ರಾಮದ ಬೃಹತ್ ಕೆರೆ ದನ ಕರುಗಳು, ಮೀನುಗಾರರಿಗೆ ಬಿಟ್ಟು ಕೊಟ್ಟಂತಾಗಿದ್ದು ಕೆರೆಯಲ್ಲಿ ಅನೈರ್ಮಲ್ಯ ತುಂಬಿ ಗಬ್ಬೆದ್ದು ಹೋಗಿದೆ. ಇದೋ ಕುಂದಗೋಳ ತಾಲೂಕಿನ ಹೋಬಳಿ ಗ್ರಾಮ ಸಂಶಿಯ ಕೆರೆ ಸ್ವಾಮಿ.
ನೋಡಲು ಇಷ್ಟು ಮಜಬುತಾಗಿ ಯಾವುದೋ ನಡೆಗಡ್ಡೆಯೇನು ? ಎಂಬಂತೆ ಭಾಸವಾಗುವ ಈ ಕೆರೆ ನೀರು ಇಂದು ಬಳಕೆಗೆ ಬಾರದಾಗಿದೆ. ಕೆರೆಯಲ್ಲಿ ಮಲ ಮೂತ್ರ ವಿಸರ್ಜನೆ ಮಾಡುತ್ತಲಿದ್ದು ಸುತ್ತಲಿನ ನಿವಾಸಿಗಳಿಗೆ ರೋಗದ ಬೀತಿ ತಲೆದೋರಿದೆ.
ಈ ಹಿಂದೆ ಇಡೀ ಸಂಶಿ ಗ್ರಾಮಕ್ಕೆ ಈ ಕೆರೆ ಕುಡಿಯುವ ನೀರಿನ ಮೂಲವಾಗಿತ್ತಂತೆ ಸದ್ಯದ ಪರಿಸ್ಥಿತಿ ನೋಡಿದ್ರೆ ಆ ಮಾತು ನಂಬಲು ಅಸಾಧ್ಯವೇ ಸರಿ. ಒಟ್ಟಾರೆ ಅಳಿವಿನಂಚಿನಲ್ಲಿರುವ ಈ ಬೃಹತ್ ಕೆರೆ ಅಭಿವೃದ್ಧಿ ಕಾಣಬೇಕಾಗಿದೆ.
Kshetra Samachara
09/12/2020 07:26 pm