ಧಾರವಾಡ : ಕಳೆದ ಹಲವು ತಿಂಗಳುಗಳಿಂದ ಧಾರವಾಡ ಕರ್ನಾಟಕ ಕಾಲೇಜಿಗೆ ಹೋಗುವ ಪುಟ್ಬಾತ್ ಸೇರಿದಂತೆ ಅವಳಿನಗರದಲ್ಲಿ ಕಸ ಬೆಳೆಯುತ್ತಿದ್ದು,ಎಲ್ಲೆಂದರಲ್ಲಿ ಕುಡುಕರು ಕುಡಿದು ಬಿಸಾಕಿದ ಸಾರಾಯಿ ಬಾಟಲಿಗಳು ಕಾಣುತ್ತಿದ್ದು,ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು.
ಈ ಕುರಿತು ಪಬ್ಲಿಕ್ ನೆಕ್ಸ್ಟ್ ವಿಸ್ತೃತವಾದ ವರದಿ ವರದಿ ಪ್ರಕಟಿಸಿತು. ಪಬ್ಲಿಕ್ ನೆಕ್ಸ್ಟ್ ವರದಿ ಆಧರಿಸಿ, ಕರ್ನಾಟಕ ಕಾಲೇಜು ಹೊಗುವ ಪುಟ್ ಬಾತ್ ಸೇರಿ ನಗರದಲ್ಲಿ ಬೆಳೆಯುತ್ತಿರುವ ಕಸವನ್ನು ಸ್ವಚ್ಛಗೊಳಿಸುವಲ್ಲಿ ಕಡೆಗೂ ಧಾರವಾಡ ಮಹಾನಗರ ಪಾಲಿಕೆ ಸ್ವಚ್ಚತಾ ಕಾರ್ಯ ಕೈಗೊಂಡಿದೆ.
ಫುಟ್‌ಪಾತ್ ಮೇಲೆ ಬೆಳೆಯುತ್ತಿರುವ ಕಸ,ಎಲ್ಲೆಂದರಲ್ಲಿ ಸರಾಯಿ ಬಾಟಲಿಗಳು,ಸಿಗರೇಟ್ ಪ್ಯಾಕೆಟಗಳದ್ದೆ ಹಾವಳಿಯಾಗಿತ್ತು,ಧಾರವಾಡದ ಕರ್ನಾಟಕ ಕಾಲೇಜಿಗೆ ಹೋಗುವ ಪುಟ್ ಬಾತ್ ಸೇರಿ ಅವಳಿ ನಗರ ಕಸದ ರಾಶಿಯಿಂದ ಅವ್ಯವಸ್ಥೆಯ ಆಗರವಾಗಿ,ರಸ್ತೆಗಳ ಮೇಲೆ ಕಸದ ರಾಶಿ ಕಂಡು ಬಂದ್ರೂ ಅಧಿಕಾರಿಗಳು ಇತ್ತ ಗಮನ ಹರಿಸಿರಲಿಲ್ಲ,ಈ ಕುರಿತು ಪಬ್ಲಿಕ್ ನೆಕ್ಸ್ಟ್ ಡಿ.7 ರಂದು ವಿಶೇಷ ವರದಿ ಪ್ರಕಟಿಸಿತ್ತು.ವರದಿಯನ್ನು ಗಮನಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ನಿನ್ನೆಯಿಂದಲೇ ನಗರದಲ್ಲಿ ಸ್ವಚ್ಚತೆ ಕೈಗೊಂಡಿದ್ದಾರೆ.
Kshetra Samachara
09/12/2020 06:28 pm