ಅಣ್ಣಿಗೇರಿ : ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 2 ರಲ್ಲಿ ಹಮ್ಮಿಕೊಂಡ ಶಾಲೆಗಾಗಿ ನಾವು-ನೀವು ಕಾರ್ಯಕ್ರಮದಲ್ಲಿ ಸ್ಥಳೀಯ ಹವ್ಯಾಸಿ ವ್ಹಾಲಿಬಾಲ ತಂಡ ಹಾಗೂ ನಿವೃತ್ತ ಶಿಕ್ಷಕ ಎಸ್.ವ್ಹಿ.ಕುರಡಗಿ ಅವರು ಸೇರಿಕೊಂಡು ಉಚಿತ ಪ್ರಿಂಟರ್ ನೀಡಿ ವಿದ್ಯಾರ್ಥಿಗಳಿಗೆ ಹಾಗೂ ಶಾಲಾಡಳಿತಕ್ಕೆ ಅನುಕೂಲ ಮಾಡಿಕೊಟ್ಟರು.
ಎಸ್.ವ್ಹಿ.ಕುರಡಗಿ ನಿರಂತರವಾಗಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಪದನ್ನೋತಿ ಹೊಂದುವದರೊಂದಿಗೆ ನಿವೃತ್ತ ಹೊಂದಿದ್ದಾರೆ.
ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಗಣ್ಯರು ಮುಂಬರುವ ದಿನಗಳಲ್ಲಿ ನಾವು ಕೂಡಾ ಸರ್ಕಾರಿ ಶಾಲೆಗಳಿಗೆ ನಮ್ಮಿಂದಾಗುವ ಸೇವೆಯನ್ನು ಸಲ್ಲಿಸುವ ಎಂದು ಭರವಸೆ ನೀಡಿದರು.
Kshetra Samachara
09/12/2020 04:22 pm