ಧಾರವಾಡ: ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಸಶಸ್ತ್ರ ಪಡೆಗಳ ಧ್ವಜ ದಿನ ಆಚರಿಸಲಾಯಿತು.
ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು,ಸಶಸ್ತ್ರ ಪಡೆಗಳ ಧ್ವಜದ ಸ್ಟಿಕರ್ ಗಳನ್ನು ಅನಾವರಣ ಮಾಡಿ, ಜಿಲ್ಲೆಯ ಪ್ರತಿಯೊಬ್ಬ ನಾಗರಿಕರೂ ಈ ಧ್ವಜದ ಸ್ಟಿಕರ್ ಗಳನ್ನು ಖರೀದಿಸಿ,ರಾಷ್ಟ್ರದ ಸೈನಿಕರ ಕಲ್ಯಾಣ ನಿಧಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಈಶ್ವರ ಕೊಡೊಳ್ಳಿ, ಕರ್ನಲ್ ಯು.ಎಸ್.ದಿನೇಶ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ , ಜಿಲ್ಲಾ ಸೈನಿಕ ಕಲ್ಯಾಣ ಮಂಡಳಿ ಸದಸ್ಯೆ ಗೌರಮ್ಮ ನಾಡಗೌಡರ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.
Kshetra Samachara
08/12/2020 02:01 pm