ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : "ಬಂದ್" ಬೇಡವೆಂದ ಕುಂದಗೋಳ" ಎಂದಿನಂತೆ ಇಂದು ಆರಂಭ

ಕುಂದಗೋಳ : ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ನೀಡಿದ ಕರ್ನಾಟಕ ಬಂದ್'ಗೆ ಕುಂದಗೋಳ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎಂದಿನಂತೆಯೇ ನಿತ್ಯದ ವ್ಯಾಪಾರ, ವಹಿವಾಟು, ಬಸ್ ಸಂಚಾರ, ಬ್ಯಾಂಕ್, ಅಂಗಡಿ ಮುಂಗಟ್ಟುಗಳು ಆರಂಭವಾಗಿದ್ದು ಸಾರ್ವಜನಿಕರು ತಮ್ಮ ದೈನಂದಿನ ಜೀವನ ಅವಲಂಬಿಸಿದ್ದಾರೆ. ಇನ್ನು ಕುಂದಗೋಳ ಪಟ್ಟಣದ ವ್ಯಾಪಾರಸ್ಥರು ಈ ಬಂದ್ ಬಗ್ಗೆ ಏನು ಹೇಳಿದ್ರು ಗೊತ್ತಾ ?

ಒಟ್ಟಾರೆಯಾಗಿ ಕುಂದಗೋಳ ಪಟ್ಟಣ ಯಥಾಸ್ಥಿತಿಯಲ್ಲಿದ್ದೂ ಬಂದ್ ಕುಂದಗೋಳಕ್ಕೆ ಬಾರದಾಗಿದೆ. ಇನ್ನು ಕರ್ನಾಟಕ ಬಂದ್ ಹಾಗೂ ಕನ್ನಡಪರ ಹೋರಾಟಗಾರರ ಪ್ರತಿಭಟನೆ ಮುನ್ಸೂಚನೆಯಿಂದ ಕುಂದಗೋಳ ಪಟ್ಟಣದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಪೊಲೀಸ್ ವಾಹನಗಳು ಗಸ್ತು ತಿರುಗುತ್ತಿವೆ.

Edited By :
Kshetra Samachara

Kshetra Samachara

05/12/2020 01:22 pm

Cinque Terre

36.69 K

Cinque Terre

2

ಸಂಬಂಧಿತ ಸುದ್ದಿ