ಅಣ್ಣಿಗೇರಿ : ಪಟ್ಟಣದ ಜೋಶಿ ಪ್ಲಾಟ್ ನಲ್ಲಿರುವ ಆಕಾಶ ಪಾರ್ಕ್ ನಲ್ಲಿ ಮುಳ್ಳು ಕಂಟೆಗಳು ಬೆಳೆದು ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಗಿರುವದನ್ನು ಕಂಡು ಪಬ್ಲಿಕ್ ನೆಕ್ಸ್ಟ್ "ಇದ್ದು ಇಲ್ಲದಂತಾದ ಆಕಾಶಪಾರ್ಕ "ಎಂಬ ಶಿರ್ಷಿಕೆಯಡಿಯಲ್ಲಿ ವರದಿಯನ್ನು ಪ್ರಕಟಿಸಿತ್ತು. ಇದಕ್ಕೆ ಎಚ್ಚೆತ್ತುಕೊಂಡ ಸ್ಥಳೀಯ ಪುರಸಭೆ ಅಧಿಕಾರಿಗಳು ಶನಿವಾರ ಬೆಳ್ಳಂ ಬೆಳಿಗ್ಗೆಯೆ ಕಚೇರಿಯ ಜೆಸಿಬಿ ಯಂತ್ರವನ್ನು ಕಳಿಸಿ ಆಕಾಶ ಪಾರ್ಕನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿರುವದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
Kshetra Samachara
05/12/2020 11:57 am