ಅಣ್ಣಿಗೇರಿ : ಸ್ವಾಮಿ ನಮ್ಮೂರಿಗೆ ರಸ್ತೆ ಬೇಕು ಚರಂಡಿ ಬೇಕು ಎನ್ನುವ ಈ ಗ್ರಾಮಸ್ಥರಿಗೆ ಅಧಿಕಾರಿಗಳು ಕೊಡುವ ರಸ್ತೆ ಭಾಗ್ಯ ಹೇಗಿರುತ್ತೆ ? ಅಂದ್ರೇ ಆ ರಸ್ತೆ ತಯಾರಾದ ಮೇಲೆ ನಿತ್ಯವು ಗೋಳಾಟ ಆರಂಭವಾಗ್ಬಿಡುತ್ತೆ ನೋಡಿ.
ಇದೋ ಅಣ್ಣಿಗೇರಿ ತಾಲೂಕಿನ ಮಂಜಿಗುಡ್ಡ ಗ್ರಾಮಗಳ ಕಾಂಕ್ರೀಟ್ ರಸ್ತೆ ನೋಡಿ ಸ್ವಾಮಿ. ಈ ರಸ್ತೆಗಳನ್ನ ನೋಡಿದ್ರೇ ಇಲ್ಲಿ ಓಡಾಡೋಕೆ ಮನಸ್ಸು ಬರೋಲ್ಲಾ ಅಷ್ಟರ ಮಟ್ಟಿಗೆ ಕೊಳಚೆ ರಾಡಿ ರಸ್ತೆ ಮೇಲೆ ಸಂಗ್ರಹವಾಗಿ ದುರ್ವಾಸನೆ ಜನರಿಗೆ ತಲೆ ದೋರಿದೆ.
ಇನ್ನು ಕೆಲವೆಡೆ ರಸ್ತೆ ಚರಂಡಿ ಎರಡು ಇಲ್ಲದೆ ನಡು ರಸ್ತೆಯಲ್ಲಿ ಹರಿಯುವ ಕೊಳಚೆ ನೀರಿನಿಂದ ರಸ್ತೆ ಮೇಲೆ ಈ ಗಲೀಜು, ಅನೈರ್ಮಲ್ಯ ವಾತಾವರಣ ಉಂಟಾಗಿ ಸುತ್ತಲಿನ ನಿವಾಸಿಗಳಿಗೆ ಸೊಳ್ಳೆ ಕಾಟದ ಜೊತೆ ರೋಗದ ಭೀತಿ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಮನಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Kshetra Samachara
04/12/2020 09:56 pm