ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬೇಸಿಗೆಯಲ್ಲೂ ನೀರು ತಗ್ಗು ಗುಂಡಿಗಳಿಂದ ಭರ್ತಿಯಾದ ರಸ್ತೆ ಸಂಚಾರಕ್ಕೆ ಸಂಚಕಾರ

ಕುಂದಗೋಳ : ಕೇವಲ ಮಳೆಗಾಲವಷ್ಟೇ ಅಲ್ಲಾ ಬೇಸಿಗೆಯಲ್ಲೂ, ಈ ಕುಂದಗೋಳ ತಾಲೂಕಿನ ರಸ್ತೆಗಳು ನೀರು ತುಂಬಿ ಗುಂಡಿ ಬಿದ್ದು ವಾಹನ ಸವಾರರ ಜೀವ ತೆಗೆಯಲು ಪಣ ತೊಟ್ಟು ನಿಂತಿವೇ ನೋಡಿ.

ಈ ಪರಿಣಾಮ ನಿತ್ಯ ಕುಂದಗೋಳ ಪಟ್ಟಣದಿಂದ ಯರಿನಾರಯಣಪುರ ಇತ್ತ ಯರಗುಪ್ಪಿವರೆಗೂ ಸಂಪರ್ಕಿಸುವ ಸುತ್ತ ಹಳ್ಳಿಗರು ಸಂಚರಿಸುವ ರಸ್ತೆಯೊಂದು ಅಕ್ಷರಶಃ ಕೆರೆಯಾಗಿ ಮಾರ್ಪಟ್ಟಿದ್ದು, ವಾಹನ ಸವಾರರು ತುಸು ಯಾಮಾರಿದ್ರೂ ಅಪಘಾತಕ್ಕೆ ತುತ್ತಾಗೋದು ಗ್ಯಾರಂಟೀ.

ಇದೋ ಈ ರಸ್ತೆ ನೋಡಿ ಸಂಪೂರ್ಣ ನೀರಿನಿಂದ ಜಲಾವೃತಗೊಂಡು ಗುಂಡಿಗಳಿಂದ ಭರ್ತಿಯಾಗಿ ಸಂಚಾರಕ್ಕೆ ಸಂಚಕಾರ ತದ್ರೂ, ಈ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಿಡಿ ಮಣ್ಣು ಹಾಕಿ ಕಣ್ಮುಚ್ಚಿ ಕುಳಿತು ಬಿಡ್ತಾರೆ. ಈ ಬಗ್ಗೆ ಇಲ್ಲಿನ ಸಂಚಾರಿಗಳು ಎನು ಹೇಳ್ತಾರೆ ನೀವೆ ಕೇಳಿ..

ಕೇಳಿದ್ರಲ್ಲಾ ನಿತ್ಯ ಖಾಸಗಿ ವಾಹನಗಳಷ್ಟೇ ಅಲ್ಲದೆ ಸಾರಿಗೆ ಬಸ್'ಗಳು ಸಂಚರಿಸುವ ಈ ರಸ್ತೆಯ ಬಗ್ಗೆ ಈ ಬೇಸಿಗೆಯ ದಿನಗಳಲ್ಲಿ ಅಧಿಕಾರಿಗಳು ಗಮನಿಸಿ ಅಭಿವೃದ್ಧಿ ಕ್ರಮ ಕೈಗೊಂಡ್ರೇ ಸಾರ್ವಜನಿಕರಿಗೆ ಒಳಿತು.

Edited By : Manjunath H D
Kshetra Samachara

Kshetra Samachara

03/12/2020 04:53 pm

Cinque Terre

36.64 K

Cinque Terre

4

ಸಂಬಂಧಿತ ಸುದ್ದಿ