ಧಾರವಾಡ: ಧಾರವಾಡದ ಲಕ್ಷ್ಮೀಸಿಂಗನಕೇರಿಯ ರಾಠೋಡ್ ಚಾಳನ ನಾಲ್ಕೈದು ಮನೆಗಳಿಗೆ ಡ್ರೈನೇಜ್ ನೀರು ತುಂಬಿ ಅವಾಂತರ ಸೃಷ್ಟಿ ಮಾಡುತ್ತಿದೆ.
ಪಾರ್ವತಿ ರಾಠೋಡ್ ಸೇರಿದಂತೆ ನಾಲ್ಕೈದು ಜನರ ಮನೆಗಳಿಗೆ ಡ್ರೈನೇಜ್ ನೀರು ನುಗ್ಗಿ ಮನೆಯವರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ.
ನಿನ್ನೆ ರಾತ್ರಿಯಿಂದ ಡ್ರೈನೇಜ್ ನೀರು ಮನೆಗಳಿಗೆ ನುಗ್ಗಿ ಗಬ್ಬು ವಾಸನೆ ಬೀರುತ್ತಿದ್ದು, ಮನೆಯವರಿಗೆ ಆ ನೀರನ್ನು ಹೊರ ಚೆಲ್ಲುವುದೇ ಕಾಯಕವಾದಂತಾಗಿದೆ. ಪಾಲಿಕೆಯವರು ಆ ಡ್ರೈನೇಜ್ ನ್ನು ಈಗಾಗಾಲೇ ಕ್ಲಿಯರ್ ಮಾಡಿದ್ದು, ಮತ್ತೂ ನೀರು ಮನೆಗಳಿಗೆ ನೀರು ನುಗ್ಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
Kshetra Samachara
03/12/2020 12:56 pm