ನವಲಗುಂದ : ನವಲಗುಂದ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಕಾಲುವೆಯು ನಿರ್ವಹಣೆ ಇಲ್ಲದೇ ಕಸದ ತಿಪ್ಪೆಯಂತಾಗಿದೆ ಎಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು, ಇದಕ್ಕೆ ಸ್ಪಂದಿಸಿದ ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆಯ ಸ್ವಚ್ಛತೆಗೆ ಮುಂದಾಗಿದ್ದಾರೆ.
ಹೌದು ಕಾಲುವೆಯೇ ಕಾಣದ ಹಾಗೇ ಇಲ್ಲಿ ಗಿಡಗಳು ಬೆಳೆದಿತ್ತು, ಬಟ್ಟೆಗಳು, ಪ್ಲಾಸ್ಟಿಕ್ ಬಾಟಲ್ ಗಳು ಸೇರಿದಂತೆ ಕೊಳಚೆಯಾಗಿತ್ತು ಆದ್ರೆ ಈಗ ಕಾಲುವೆಯಲ್ಲಿ ನೀರನ್ನು ಸಹ ಬಿಡಲಾಗಿದ್ದು, ಕಾಲುವೆಯ ಒಂಡೆಯನ್ನು ಸ್ವಚ್ಛಗೊಳಿಸೋ ಕೆಲಸ ನಡಿಯುತ್ತಿದೆ.
Kshetra Samachara
02/12/2020 07:02 pm