ಕುಂದಗೋಳ : ಈ ಗ್ರಾಮದಿಂದ ಗ್ರಾಮಗಳನ್ನ ಸಂಪರ್ಕ ಮಾಡೋ ಒಳ ರಸ್ತೆಗಳ ಅವ್ಯವಸ್ಥೆಗಳ ಪಟ್ಟಿ ಒಂದಾ ಎರಡಾ ಆ ಸಾಲಿನಲ್ಲಿ ಈ ಬೆನಕನಹಳ್ಳಿ ಮತ್ತು ಗುಡೇನಕಟ್ಟಿಯ 3 ಕಿ.ಮೀ ರಸ್ತೆ ಅತಿವೃಷ್ಟಿ ಪರಿಣಾಮ ಹಾಳಾದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಕಟಿಸಿತ್ತು.
ಹಳ್ಳ ಹಿಡಿದು ಹಾಳಾಗಿವೆ ಹಳ್ಳಿಗಳನ್ನ ಸಂಪರ್ಕ ಮಾಡೋ ರಸ್ತೆಗಳು ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ಧಿ ಬಿತ್ತರಿಸಿದ್ದನ್ನ ನೋಡಿದ ಅಧಿಕಾರಿಗಳು ಬೆನಕನಹಳ್ಳಿ ಗ್ರಾಮ ಪಂಚಾಯಿತಿಯ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಬೆನಕನಹಳ್ಳಿ ವ್ಯಾಪ್ತಿಯ ರಸ್ತೆಯ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ಈಗಾಗಲೇ ದುರಸ್ತಿ ಕಾರ್ಯ ನಡೆದಿದ್ದು, ಕೆಂಪು ಮಣ್ಣು ಹಾಕಿಸಿ ರಸ್ತೆಗೆ ತಾಗುವಂತೆ ಬೆಳದಿದ್ದ ಮುಳ್ಳು ಕಂಟಿಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಈ ಬಗ್ಗೆ ಬೆನಕನಹಳ್ಳಿ ಗ್ರಾಮಸ್ಥರು ಖುಷ್ ಆಗಿದ್ದು, ತಮ್ಮ ಹೊಲಗಳ ಸಂಚಾರಕ್ಕೆ ರಸ್ತೆ ದುರಸ್ತಿ ಕಾರ್ಯ ಪ್ರಾರಂಭವಾಗಿರುವುದನ್ನ ಸ್ವತಃ ಗ್ರಾಮಸ್ಥರೇ ಪಬ್ಲಿಕ್ ನೆಕ್ಸ್ಟ್ ಗೆ ವಿಡಿಯೋ ಕಳುಹಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
Kshetra Samachara
02/12/2020 05:24 pm