ಧಾರವಾಡ: ಮೈಸೂರು-ಧಾರವಾಡ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಹಬ್ಬದ ವಿಶೇಷ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಪ್ರತಿ ದಿನವೂ ಈ ರೈಲು ಸಂಚರಿಸಲಿದೆ.
ನೈಋತ್ಯ ರೈಲ್ವೆ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಧಾರವಾಡ-ಮೈಸೂರು ಮತ್ತು ಮೈಸೂರು-ಧಾರವಾಡ ನಡುವೆ ಸಂಚಾರ ನಡೆಸುವ ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ರೈಲು ಸಂಖ್ಯೆ 07302/ 07301 ಧಾರವಾಡ-ಮೈಸೂರು-ಧಾರವಾಡ ಹಬ್ಬದ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಯನ್ನು ಧಾರವಾಡದಿಂದ 10/12/2020 ರವರೆಗೆ ಮತ್ತು ಮೈಸೂರಿನಿಂದ 11/12/2020 ರವರೆಗೆ ವಿಸ್ತರಿಸಲಾಗಿದೆ.
Kshetra Samachara
02/12/2020 07:27 am