ಧಾರವಾಡ: ನಮ್ಮ ಧಾರವಾಡದಾಗಿನ ರಸ್ತೆ ನೋಡಿದ್ರ ಅವು ಕನಸಿನ್ಯಾಗ ಬರೋ ರಸ್ತೆ ಬಿಡ್ರಿ..ಎಲ್ಲಿ ನೋಡ್ತೀರಿ ಅಲ್ಲಿ ತೆಗ್ಗು, ಗಟಾರಾ ನಿರ್ಮಾಣ ಆಗ್ಯಾವ.ಮಳಿಗಾಲ ಮುಗೀಲಿ ರಸ್ತೆ ಮಾಡಸ್ತೇವಿ ಅಂತಾ ನಮ್ಮ ಜನಪ್ರತಿನಿಧಿಗಳು ಹೇಳಾಕತ್ತಿದ್ರ. ಮಳಿಗಾಲ ಮುಗದ ಹಳಮಾತ ಆಗೇತಿ. ಚಳಿಗಾಲ ಆರಂಭ ಆಗಿ ಧಾರವಾಡ ಮತ್ತ ಧೂಳಮಯ ಆಗೋದ್ರೋಳಗ ರಸ್ತೆ ಮಾಡಸ್ರಿ ಅನ್ನೋ ಒತ್ತಾಯ ಕೇಳಿ ಬರಾಕತ್ತಾವ ನೋಡ್ರಿ.
ಅದೆಲ್ಲ ಹಂಗ ಇರ್ಲಿ ಬಿಡ್ರಿ.. ಧಾರವಾಡ ನಡು ಊರಾಗ ಅಲ್ಲಲ್ಲಿ ಸಣ್ಣು ಕಾಲುವೆ ನಿರ್ಮಾಣ ಆಗ್ಯಾವ ನೋಡ್ರಿ. ನೀವು ಈಗೇನ ನೋಡಾಕತ್ತೀರಲ್ಲ ಇದು ಧಾರವಾಡದ ಉಪವನ ಹೋಟೆಲ್ ಎದುರಿಗೆ ಇರೋ ರಸ್ತೆ. ಈ ರಸ್ತೆದಾಗ ಈ ಕಾಲುವೆ ನಿರ್ಮಾಣ ಆಗಿ ಮಂದಿಗೆ ಬಾಳ ತ್ರಾಸ್ ಕೊಡಾಕತ್ತೈತಿ ನೋಡ್ರಿ. ನಮ್ಮ ಕಾರ್ಪೋರೇಶನ್ ನವರೋ ಇದನ್ನ ನೋಡ್ಯಾರೋ ಇಲ್ಲೋ ಗೊತ್ತಿಲ್ಲ. ಇದಕ್ಕೊಂದಿಷ್ಟ ಡಾಂಬರ್ ಹಾಕಿ ಕಾಲುವೆ ಮುಚ್ಚಿದ್ರ ಬಾಳ ಅನುಕೂಲ ಅಕ್ಕೈತಿ ಅಂತಾ ಜನಾ ಅನ್ನಾಕತ್ತಾರ. ಮಳಿಗಾಲ ಮುಗದೈತಿ ಧಾರವಾಡದಾಗ ಹಾಳಾಗಿರೋ ರಸ್ತೆಕ್ಕ ಇನ್ನಾದ್ರು ಮುಕ್ತಿ ನೋಡಬೇಕಾಗೈತಿ ನೋಡ್ರಿ. ಅಂದಂಗ ಈ ಕಾಲುವೆ ಮೊದಲ ಮಚ್ಚಿಸೋ ಕೆಲಸ ಕಾರ್ಪೋರೇಶನ್ ನವರು ಮಾಡಬೇಕ್ರ್ಯಾ ಮತ್ತ.
Kshetra Samachara
01/12/2020 11:25 am