ಹುಬ್ಬಳ್ಳಿ: ಆ ಮಹಾನಗರದಲ್ಲಿ ಪ್ರತಿದಿನ ಒಂದಿಲ್ಲೊಂದು ಕ್ರೈಂ ನಡೀತಾ ಇರುತ್ತೆ. ಅದಕ್ಕಾಗೇ ಆ ಮಹಾನಗರದಲ್ಲಿ ಅಪರಾಧ ಚಟುವಟಿಕೆ. ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಎಲ್ಲೆಡೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಆದರೆ ಕೋಟಿ ಕೋಟಿ ಖರ್ಚು ಮಾಡಿ ಅಳವಡಿಸಿದ ನೂರಾರು ಸಿಸಿ ಕ್ಯಾಮರಾಗಳು ಇದೀಗ ಕಣ್ಣಿದ್ದು ಕುರುಡಾಗಿವೆ. ಪೊಲೀಸ ಇಲಾಖೆ ಸಿಸಿ ಕ್ಯಾಮರಾಗಳನ್ನು ರಿಪೇರಿ ಮಾಡುವಂತೆ ಮನವಿ ಮಾಡಿದ್ರು ಪಾಲಿಕೆ ಮಾತ್ರ ಕ್ಯಾರೆ ಎನ್ನತ್ತಿಲ್ಲ ನೋಡಿ..
ಛೋಟಾ ಮುಂಬೈ ಎಂದೇ ಪ್ರಸಿದ್ದ ಪಡೆದಿರುವ ವಾಣಿಜ್ಯ ನಗರಿ ಹುಬ್ಬಳ್ಳಿ ಧಾರವಾಡದಲ್ಲಿ ದಿನೇ ದಿನೇ ಅಪರಾಧ ಕೃತ್ಯಗಳು ಹೆಚ್ಚುತ್ತಲೆ ಸಾಗಿದೆ. ಸಂಚಾರ ದಟ್ಟಣೆ ಸಹ ನಿಯಂತ್ರಣ ತಪ್ಪುತ್ತಿದೆ. ಅಪರಾಧ ಚಟುವಟಿಕೆಗಳ ನಿಯಂತ್ರಣ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಮಾಡುವುದಕ್ಕಾಗೇ ಮಹಾನಗರ ಪಾಲಿಕೆ ಹಾಗೂ ಪೊಲೀಸ ಇಲಾಖೆ ಮಹಾನಗರದ ವಿವಿಧೆಡೆ ನೂರಾರು ಸಿಸಿ ಕ್ಯಾಮರಾಗಳನ್ನ ಅಳವಡಿಕೆ ಮಾಡಿದೆ. ಆದ್ರೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಹಾನಗರದ ವಿವಿಧೆಡೆ ಅಳವಡಿಸಿರುವ ಸಿಸಿ ಕ್ಯಾಮರಾಗಳು ಇದೀಗ ಕಣ್ಣಿದ್ದು ಕುರುಡಾಗಿವೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅಳವಡಿಸಿದ ಕ್ಯಾಮರಾಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿರುವುದರಿಂದ ಮಹಾನಗರದಲ್ಲಿ ಮತ್ತಷ್ಟು ಅಪರಾಧ ಕೃತ್ಯಗಳು ಹೆಚ್ಚಾಗುವಂತೆ ಮಾಡಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರದ ವಿವಿಧ ಬಡಾವಣೆ. ಹಾಗೂ ಪ್ರಮುಖ ವೃತ್ತಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ಬರೋಬ್ಬರಿ 474 ಸಿಸಿ ಕ್ಯಾಮರಾಗಳನ್ನ ಅಳವಡಿಸಲಾಗಿದೆ. ಆದ್ರೆ 474 ಸಿಸಿ ಕ್ಯಾಮರಾಗಳ ಫೈಕಿ ಇದೀಗ 188 ಕ್ಯಾಮರಾಗಳು ಸುಸ್ಥಿತಿಯಲ್ಲಿವೆ. ಇನ್ನುಳಿದಂತೆ ಪೊಲೀಸ ಇಲಾಖೆ 74 ಕ್ಯಾಮರಾಗಳನ್ನ ಅಳವಡಿಸಿದ್ದು ಇದರಲ್ಲಿ 72 ಕ್ಯಾಮರಾಗಳು ಕೆಲಸ ಮಾಡಿತ್ತಿವೆ. ಹೀಗಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಮಹಾನಗರದ ವಿವಿಧೆಡೆ ಅಳವಡಿಸಿರುವ ನೂರಾರು ಕ್ಯಾಮರಾಗಳು ನಿರ್ವಹಣೆ ಇಲ್ಲದೇ ಕೆಟ್ಟು ಹಾಳಾಗಿ ಹೋಗಿವೆ. ಹೀಗಾಗಿ ಪೊಲೀಸ ಇಲಾಖೆ ಅಪರಾಧ ಕೃತ್ಯಗಳು ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಪಾಲಿಕೆ ವ್ಯಾಪ್ತಿಯಲ್ಲಿನ ನೂರಾರು ಕ್ಯಾಮರಾಗಳನ್ನ ರಿಪೇರಿ ಮಾಡಿಸುವಂತೆ ಮನವಿ ಮಾಡಿದ್ರು ಪಾಲಿಕೆ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಪೊಲೀಸರು ಮಹಾನಗರದಲ್ಲಿ ನಡೆಯೋ ಸರಗಳ್ಳತನ. ಬೈಕ್ ಕಳ್ಳತನ, ಕೊಲೆ. ಅಪಘಾತ ಪ್ರಕರಣಗಳನ್ನ ತಡೆಗಟ್ಟಲು ವಿಫಲವಾಗಿತ್ತಿದೆ. ಅಲ್ಲದೇ ಪೊಲೀಸ ಇಲಾಖೆ ಹಾಗೂ ಪಾಲಿಕೆ ಮಧ್ಯದ ಸಮನ್ವಯ ಕೊರತೆಯಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಿ ಕ್ಯಾಮರಾಗಳು ಕೆಟ್ಟು ಹಾಳಾಗುತ್ತಿರುವುದರಿಂದ ಸರ್ಕಾರದ ಹಣ ಪೊಲಾಗುತ್ತಿರುವುದು ಸುಳ್ಳಲ್ಲವಾಗಿದೆ.
ಮಹಾನಗರ ಪಾಲಿಕೆ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡುವ ವೇಳೆ ತೋರಿದ ಉತ್ಸಾಹ ಇದೀಗ ನಿರ್ವಹಣೆ ಮಾಡುವಲ್ಲಿ ತೋರಿಸುತ್ತಿಲ್ಲ. ಅಲ್ಲದೇ ಸಿಸಿ ಕ್ಯಾಮರಾಗಳ ಅಳವಡಿಕೆಯಲ್ಲಿ ಅಕ್ರಮ ಸಹ ನಡೆದಿದೆ ಅನ್ನೋ ಸ್ಥಳೀಯರ ಆರೋಪವಾಗಿದೆ. ಇನಾದ್ರು ಮಹಾನಗರದಲ್ಲಿನ ಸಿಸಿ ಕ್ಯಾಮರಾಗಳ ರಿಪೇರಿ ಮಾಡಿಸಿ ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಮಾತ್ರ ಅಪರಾಧ ಚಟುವಟಿಕೆ ತಡೆಯಬಹುದಾಗಿದೆ.
Kshetra Samachara
29/11/2020 08:55 pm