ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ಅತಿ ಹೆಚ್ಚು ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಹೊಂದಿದ ಹುಬ್ಬಳ್ಳಿ ಕಿಮ್ಸ್

ಹುಬ್ಬಳ್ಳಿ- ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಹೊಂದಿರುವ, ಹುಬ್ಬಳ್ಳಿ ಯ ಕಿಮ್ಸ್ ಆಸ್ಪತ್ರೆ. ಈಗ ರಾಜ್ಯದಲ್ಲಿ ಅತಿ ಹೆಚ್ಚು ಆಕ್ಸಿಜನ್ ಸಂಗ್ರಹ ಸಾಮರ್ಥ್ಯವಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ, 5 ದಿನಗಳ ಹಿಂದೆ 20 ಕಿಲೋ ಲೀಟರ್ ಎಂಎಲ್ಒ ಟ್ಯಾಂಕ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಈ ಮೂಲಕ ಒಟ್ಟಾರೆ 40 ಕೆಎಲ್ ಆಕ್ಸಿಜನ್ ಟ್ಯಾಂಕ್ ಹೊಂದಿದೆ. ಈಗಾಗಲೇ ಕಿಮ್ಸ್ ನಲ್ಲಿ ಕೇಂದ್ರೀಕೃತ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಇದ್ದು ಇದಕ್ಕೆ ಅನುಗುಣವಾಗಿ 50ಲಕ್ಷ ಮೊತ್ತದ ಹೆಚ್ಚುವರಿ, 20 ಕಿಲೋ ಲೀಟರ್ ಎಂಎಲ್ಒ ಟ್ಯಾಂಕ್ ಅಳವಡಿಕೆಯಾಗಿದೆ...

ಒಟ್ಟಿನಲ್ಲಿ ಕೊರೊನಾ ಎರಡನೇ ಅಲೆಯ ಭೀತಿ ಮೂಡುತ್ತಿರುವ ಬೆನ್ನಲ್ಲೆ, ಕಿಮ್ಸ್ ನಲ್ಲಿ ಹೆಚ್ಚುವರಿ ಆಕ್ಸಿಜನ್ ಟ್ಯಾಂಕ್ ಅಳವಡಿಕೆ ಆಗಿರುವುದು ಕಿಮ್ಸ್ ಆಡಳಿತ ಮಂಡಳಿ ಮತ್ತಷ್ಟು ಉತ್ಸಾಹ ಮೂಡಿಸಿದೆ.

Edited By : Nagesh Gaonkar
Kshetra Samachara

Kshetra Samachara

25/11/2020 07:06 pm

Cinque Terre

64.34 K

Cinque Terre

1

ಸಂಬಂಧಿತ ಸುದ್ದಿ