ಕುಂದಗೋಳ : ಮಹಿಳೆಯರು ಸಬಲರಾಗಿ ಜೀವನ ರೂಪಿಸಿಕೊಳ್ಳಲು ನಿತ್ಯ ಜೀವನದಲ್ಲಿ ತಮ್ಮ ರಕ್ಷಣೆಗಿರುವ ಕಾನೂನುಗಳು ಅರಿವನ್ನು ಸಹ ತಿಳಿಯ ಬೇಕಾಗಿರವುದು ಅಷ್ಟೇ ಅವಶ್ಯವಾಗಿದೆ. ಈ ಆಧುನಿಕ ಕಾಲಘಟ್ಟದಲ್ಲಿ ಮಹಿಳೆ ರಕ್ಷಣೆಗಾಗಿ ಸಂವಿಧಾನವೇ ರೂಪಿಸಿದ ನಿಮ್ಮ ಹಕ್ಕುಗಳನ್ನು ಪ್ರತಿ ಮಹಿಳೆಯರು ಪಡೆಯಲು ಅರ್ಹರು ಎಂದು ಹಿರಿಯ ವಕೀಲ ಜಿ.ಬಿ.ಸೊರಟೂರು ಹೇಳಿದರು.
ಕುಂದಗೋಳ ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ನಡೆದ ಮಹಿಳಾ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ದೌರ್ಜನ್ಯ ತಡೆ ಕಾಯ್ದೆ, ಮಹಿಳಾ ರಕ್ಷಣಾ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳ ಬಗ್ಗೆ ಮಹಿಳೆಯರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಿಡಿಪಿಓ ಅನ್ನಪೂರ್ಣ ಸಂಗಳದ ಕೋವಿಡ್ ಜಾಗೃತೆಯ ಪ್ರಮಾಣ ವಚನ ಭೋಧಿಸಿದರೆ, ವಕೀಲ ಜಿ.ಬಿ.ಸೊರಟೂರು ರಾಷ್ಟ್ರೀಯ ಐಕ್ಯತಾ ಸಪ್ತಾಹದ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಪ್ರಕಾಶ್ ಕೋಕಾಟೆ, ಈಶ್ವರಪ್ಪ ಬೆಂಡೆವಾಡ, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
Kshetra Samachara
25/11/2020 12:29 pm