ಹುಬ್ಬಳ್ಳಿ; ಹು-ಧಾ ಮಹಾನಗರದ ಜನತೆಯ ಸಂಕಷ್ಟ ಹೇಳ ತೀರದಾಗಿದೆ.ದಿನಕ್ಕೊಂದು ಸಮಸ್ಯೆಗಳನ್ನು ಅನುಭವಿಸುತ್ತ ವಾಣಿಜ್ಯನಗರ ಎಂಬ ಹೆಗ್ಗಳಿಕೆಯ ಹಣೆಪಟ್ಟಿಯಲ್ಲಿ ಸಮಸ್ಯೆಗಳಿಂದ ಬದಲಾಗದ ಹಣೆಬರಹದಲ್ಲಿ ಜೀವನ ನಡೆಸುವಂತಾಗಿದೆ.
ಹೌದು..ಹುಬ್ಬಳ್ಳಿ ಹೊಸೂರಿನ ಕೆನರಾ ಹೋಟೆಲ್ ಪಕ್ಕದಲ್ಲಿರುವ ಕಟ್ಟಡ ಪೂರ್ತಿಯಾಗಿ ಡ್ರೈನೇಜ್ ನೀರಿನಿಂದ ಸಂಪೂರ್ಣ ಗಬ್ಬೆದ್ದು ನಾರುತ್ತಿದೆ. ಸಂಬಂಧಪಟ್ಟ ಪಾಲಿಕೆಯ ಅಧಿಕಾರಿಗಳು ಎಷ್ಟೇ ವಿನಂತಿಸಿದರು, ಕಂಪ್ಲೇಂಟ್ ಮಾಡಿದರು, ತಿರುಗಿ ಸಹ ನೋಡುತ್ತಿಲ್ಲ, ಇದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.
ಡ್ರೈನೇಜ್ ಸಮಸ್ಯೆಯಿಂದ ಕಟ್ಟಡದ ಎಲ್ಲಾ ಅಂಗಡಿಗಳು ಗಲೀಜು ನೀರಿನಿಂದ ತುಂಬಿ ಹೋಗಿವೆ. ಅಂಗಡಿ ಮಾಲೀಕರು ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನೀರನ್ನು ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಡ್ರೈನೇಜ್ ನೀರು ಬರೀ ಕಟ್ಟಡ ಆವರಿಸದೆ, ರಸ್ತೆ ತುಂಬೆಲ್ಲಾ ಹರಿಯುತ್ತಿದ್ದು,ದುರ್ವಾಸನೆಗೆ ಜನರು ರೋಸಿಹೋಗಿದ್ದಾರೆ.
ಇನ್ನೂ ಅವ್ಯವಸ್ಥೆಯಿಂದ ಸಂಚಾರದ ಕಷ್ಟ ಅನುಭವಿಸುತ್ತಿರುವ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಅಲ್ಲದೇ ಅಂಗಡಿಯಲ್ಲಿನ ದುಬಾರಿ ವಸ್ತುಗಳು ಇದರಿಂದ ಹಾಳಾಗಿ ಹೋಗಿವೆ. ಈ ಕೂಡಲೇ ಎಚ್ಚೆತ್ತು ಸಂಬಂಧಪಟ್ಟವರು ಸರಿಪಡಿಸಬೇಕು ಎನ್ನುವ ಅಭಿಪ್ರಾಯ ಜನರಿಂದ ಕೇಳಿ ಬರುತ್ತಿದೆ. 3 ದಿನಗಳ ಹಿಂದೆಯೇ ಪಾಲಿಕೆಗೆ ಕಂಪ್ಲೇಂಟ್ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ ಹಾಗೂ ಯಾವೊಬ್ಬ ಅಧಿಕಾರಿಯೂ ಇತ್ತ ಗಮನಹರಿಸಿಲ್ಲ ಎನ್ನುತ್ತಾರೆ ಸ್ಥಳೀಯರು.
Kshetra Samachara
24/11/2020 10:26 pm