ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಳೇ ಬಸ್ ಗಳಿಗೆ ಇತಿಶ್ರೀ ಹಾಡಲು ಮುಂದಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

ಹುಬ್ಬಳ್ಳಿ- ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ‌. ಆದ್ರೆ ಬಸ್ ಗಳ ನಿರ್ವಹಣೆಯೇ ಸಾರಿಗೆ ನಿಗಮಕ್ಕೆ ಹೆಚ್ಚು ತಲೆನೋವಾಗಿದೆ. ಅದರಲ್ಲೂ‌ ಪ್ರತಿ ವರ್ಷ ಹಳೇ ಬಸ್ ಗಳನ್ನು ಬದಲಾಯಿಸಿ ಹೊಸ ಹೊಸ ಬಸ್ ಗಳ ಖರೀದಿ ಮಾಡುವದು ಅನಿವಾರ್ಯವಾಗಿದೆ.

ಸಾರಿಗೆ ನಿಯಮದ ಪ್ರಕಾರ 9 ಲಕ್ಷ ಕಿಮೀ. ಓಡಿದ ಬಸ್ ಗಳನ್ನು ಹಳೇ ಬಸ್ ಎಂದು ‌ಪರಿಗಣನೆ ಮಾಡಲಾಗುತ್ತದೆ‌. ಆ ಬಸ್ ಸಾರ್ವಜನಿಕ ಸೇವೆಗೆ ಸೂಕ್ತವಲ್ಲ. ಹೀಗಾಗಿ ಅಂತ ಬಸ್ ಗಳಿಗೆ ಮುಕ್ತಿ‌ ನೀಡಬೇಕಾಗುತ್ತದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಟ್ಟು 5 ಸಾವಿರ ಬಸ್ ಗಳಿದ್ದು, ಅದರಲ್ಲಿ ಈ ವರ್ಷ 450 ಹಳೇ ಬಸ್ ಗಳನ್ನು ತಗೆದು ಹಾಕಬೇಕಿತ್ತು. ಆದ್ರೆ ಕೊವಿಡ್ ಕಾರಣದಿಂದ 350 ಬಸ್ ಗಳನ್ನು ಗುಜರಿಗೆ ಹಾಕಲು ನಿರ್ಧರಿಸಿದೆ. ಉಳಿದಂತೆ 100 ಬಸ್ ಗಳ ಇಂಜಿನ್ ಸಾಮರ್ಥ್ಯ ಹಾಗೂ ಕೆಲವು ಉಪಕರಣಗಳನ್ನು ಬದಲಾಯಿಸಿ ಓಡಿಸುವ ಉದ್ದೇಶ ಹೊಂದಿದೆ.‌ ಕೊರೊನಾ ಕಾರಣದಿಂದ ಲಾಕ್ ಆಗಿದ್ದರಿಂದ ಸಾರಿಗೆ ನಿಗಮಕ್ಕೆ ಸಾಕಷ್ಟು ನಷ್ಟ ಸಂಭವಿಸಿದ್ದರಿಂದ ಇದು ಅನಿವಾರ್ಯವಾಗಿದೆ.

ಹೀಗಾಗಿ ಹಳೇ ಬಸ್ ಗಳು ಆದಾಯಕ್ಕಿಂತ ನಷ್ಟ ಹೆಚ್ಚಾಗುವರಿಂದ ಪ್ರತಿ ವರ್ಷ ಇಂತಿಷ್ಟು ಬಸ್ ಗಳನ್ನು ಗುಜರಿಗೆ ಹಾಕುವದು ಸಾರಿಗೆ ನಿಗಮಕ್ಕೆ ಅನಿವಾರ್ಯವಾಗಿದೆ.

Edited By : Nagesh Gaonkar
Kshetra Samachara

Kshetra Samachara

24/11/2020 05:23 pm

Cinque Terre

40.68 K

Cinque Terre

5

ಸಂಬಂಧಿತ ಸುದ್ದಿ