ಅಣ್ಣಿಗೇರಿ : ಸಾರ್ವಜನಿಕ ಆಸ್ತಿ ನಮ್ಮೇಲ್ಲರ ಆಸ್ತಿ ಎಂಬ ನಾಣ್ಣುಡಿ ಅಣ್ಣಿಗೇರಿ ತಾಲೂಕಿನ ಭದ್ರಾಪೂರ ಗ್ರಾಮದಲ್ಲಿ ಮರೆಯಾಗಿದೆ.
ಹೌದು ! ಸಾರ್ವಜನಿಕರಿಗಾಗಿ ನಿತ್ಯ ನೀರನ್ನು ಸಂಗ್ರಹಿಸಿ ಊರಿಗೆ ಸರಬರಾಜು ಮಾಡುವ ನೀರಿನ ಟ್ಯಾಂಕ ಶೀಥಿಲಗೊಂಡಿದ್ದು, ಟ್ಯಾಂಕ ನ ಸಿಮೆಂಟ್ ಪದರು ಒಂದೊಂದಾಗಿ ಕೀಳುತ್ತಿವೆ.
ಇನ್ನು ಟ್ಯಾಂಕ ಎರಲು ನಿರ್ಮಿಸಿದ ಕಬ್ಬಿನ ಏಣಿ ತುಕ್ಕು ಹಿಡಿದಿದ್ದು, ಅಪಾಯಕ್ಕೆ ಏಡೆ ಮಾಡಿ ಕೊಟ್ಟಂತಿವೆ.
ಈ ಟ್ಯಾಂಕ ಇಷ್ಟು ಅವ್ಯವಸ್ಥೆ ತಲುಪಿದ್ದರೂ ಈ ಭದ್ರಾಪೂರ ಗ್ರಾಮದ ಜನರು ಈ ಟ್ಯಾಂಕ ನೆರಳಲ್ಲೆ ಬಟ್ಟೆ, ಬರೆ ತೊಳೆಯುವುದು, ಪ್ರಾಣಿಗಳನ್ನ ಕಟ್ಟುವುದು, ವಾಹನ ನಿಲ್ಲಿಸುತ್ತಲಿದ್ದು ಮುಂದಾಗುವ ಅನಾಹುತಕ್ಕೆ ಜನರೇ ಆಹ್ವಾನ ಮಾಡುವಂತಿದೆ.
ಈಗಾಗಲೇ ನೀರಿನ್ ಟ್ಯಾಂಕನ ಪಿಲ್ಲರಗಳು ಸವೆದು ಹೋಗಿದ್ದು, ಜನರು ಮತ್ತು ಅಧಿಕಾರಿಗಳು ಮುಂದಾಗುವ ಅನಾಹುತದ ಬಗ್ಗೆ ಎಚ್ಚೆತ್ತು ಕೊಳ್ಳಬೇಕಿದೆ.
Kshetra Samachara
23/11/2020 06:55 pm