ಕುಂದಗೋಳ : ತಾಲೂಕಿನ ರೈತರಿಗೆ ಅಕಾಲಿಕ ಮಳೆಯಿಂದ ಬೆಳೆ ನಷ್ಟ ಆಗಿದ್ದು ಕೂಡಲೇ ಸರ್ಕಾರ ಪರಿಹಾರ ಒದಗಿಸಬೇಕು, ಹಾಗೂ ಆಶ್ರಯ ಯೋಜನೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಶೀಘ್ರ ಹಣ ಬಿಡುಗಡೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶೀಲ್ದಾರ ಕಚೇರಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಳಿಕ ಗ್ರೇಡ್-2 ತಹಶೀಲ್ದಾರ ವಿ.ವಾಯ್.ಮುಳಗುಂದಮಠರವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿದರು.
Kshetra Samachara
20/11/2020 01:20 pm