ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಂಚಾಯ್ತಿ ಎದುರೇ ನಿಂತು ತನಗಾದ ಅನ್ಯಾಯ ತೋಡಿಕೊಂಡ ಯುವಕ

ಧಾರವಾಡ: ಬಸವ ವಸತಿ ಯೋಜನೆಯಡಿ ತನಗೆ ಅನುದಾನ ಮಂಜೂರಾಗದೇ ಇರುವುದರಿಂದ ನೊಂದ ಯುವಕನೋರ್ವ ಗ್ರಾಮ ಪಂಚಾಯ್ತಿ ಎದುರೇ ನಿಂತು ತನಗಾದ ಅನ್ಯಾಯವನ್ನು ವೀಡಿಯೋ ಮೂಲಕ ತೋಡಿಕೊಂಡಿದ್ದು, ಆ ವೀಡಿಯೋ ಇದೀಗ್ ವೈರಲ್ ಆಗಿದೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಉಳವಪ್ಪ ಕೋಟೂರ ಎಂಬಾತನೇ ಈ ರೀತಿ ಗ್ರಾಮ ಪಂಚಾಯ್ತಿ ಎದುರೇ ನಿಂತು ಅನ್ಯಾಯ ತೋಡಿಕೊಂಡ ಯುವಕ.

ಬಸವ ವಸತಿ ಯೋಜನೆಯಡಿ ಉಳವಪ್ಪನಿಗೆ ಮನೆ ಮಂಜೂರಾಗಿತ್ತಂತೆ. ಈ ಕುರಿತ ಒಂದು ಬಿಲ್ ಕೂಡ ಬರದೇ ಇರುವುದರಿಂದ ಪಂಚಾಯ್ತಿಗೆ ಪ್ರಶ್ನೆ ಮಾಡಲು ಹೋದರೆ, ಪಂಚಾಯ್ತಿ ಪಿಡಿಓ ಆಗಲಿ ಹಾಗೂ ಸಿಬ್ಬಂದಿಯಾಗಲಿ ಯಾರೂ ಈತನ ಮಾತನ್ನೇ ಕೇಳುತ್ತಿಲ್ಲವಂತೆ. ನಿನಗೆ ಬೇಕಾದರೆ ಹತ್ತು ಸಾವಿರ ರೂಪಾಯಿ ಕೊಡುತ್ತೇವೆ. ಮೊಸಳೆ ಬಾಯಲ್ಲಿ ನಾವು ಸಿಕ್ಕಂತಾಗಿದೆ ಎಂದು ಪಂಚಾಯ್ತಿಯವರು ಹೇಳುತ್ತಿದ್ದಾರಂತೆ. ಬಂದ ಬಿಲ್ ನ್ನು ಪಂಚಾಯ್ತಿಯವರೇ ತೆಗೆದುಕೊಂಡಿದ್ದಾರೆ ಎಂಬ ಆರೋಪವನ್ನು ಉಳವಪ್ಪ ಮಾಡಿದ್ದಾನೆ. ಅಲ್ಲದೇ ಮೇಲಾಧಿಕಾರಿಗಳು ಕೂಡಲೇ ಈ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂಬ ಒತ್ತಾಯವನ್ನೂ ಉಳವಪ್ಪ ಮಾಡಿದ್ದಾನೆ.

Edited By : Manjunath H D
Kshetra Samachara

Kshetra Samachara

17/11/2020 04:42 pm

Cinque Terre

22.22 K

Cinque Terre

1

ಸಂಬಂಧಿತ ಸುದ್ದಿ