ಕೋವಿಡ್ ವಿಶೇಷ ಜನ ಜಾಗೃತಿ ವಾಹನಕ್ಕೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ
ಹುಬ್ಬಳ್ಳಿ: ಕೋವಿಡ್-19 ವೈರಾಣು ತಡೆಗೆ ಶ್ರವ್ಯ-ದೃಶ್ಯದ ಮೂಲಕ ಜಾಗೃತಿ ಮೂಡಿಸಲು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ವಿಶೇಷ ಪ್ರಚಾರ ವಾಹನಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
ಇಂದು ಹುಬ್ಬಳ್ಳಿಯ ಮಧುರಾ ಕಾಲೋನಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ, ಎಲ್.ಇ.ಡಿ. ಮೊಬೈಲ್ ವಾಹನಗಳಿಗೆ ಸಚಿವರು ಹಸಿರು ನಿಶಾನೆ ತೋರಿಸಿದರು. ನಂತರ ಮಾತಾನಡಿ, ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಹಾಗೂ ಮಂಜಾಗ್ರತಾ ಕ್ರಮಗಳ ಕುರಿತು, ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಲು ಸರಕಾರ ವಿಶೇಷ ಪ್ರಚಾರ ಕಾರ್ಯ ಕೈಗೊಂಡಿದೆ. ಜಿಲ್ಲೆಯ 180 ಹಳ್ಳಿಗಳಲ್ಲಿ ಆಧುನಿಕ ತಂತ್ರಜ್ಞಾನದ ಬೃಹತ್ ಎಲ್‍ಇಡಿ ಪರದೆ ಹೊಂದಿರುವ ಎರೆಡು ವಾಹನಗಳು ಸಂಚರಿಸಲಿವೆ. ಪ್ರತಿದಿನ ಒಂದು ವಾಹನ 5 ಗ್ರಾಮಗಳಿಗೆ ತರಳಿ ಜನ ಜಾಗೃತಿ ಮೂಡಿಸುವುದು. ಕೊವೀಡ್-19 ಕುರಿತು ಸಾರ್ವಜನಿಕರು ನಿರ್ಲಕ್ಷ್ಯ ಮನೋಭಾವ ತಾಳದೆ ಎಚ್ಚರಿಕೆಯಿಂದರಬೇಕು ಎಂದರು.
Kshetra Samachara
17/11/2020 04:34 pm