ನವಲಗುಂದ : ದೀಪಾವಳಿ ಸಡಗರ ಸಂಭ್ರಮ ಜನರ ಮನೆ, ಮನಸ್ಸಿನಲ್ಲಿ ಮನೆ ಮಾಡಿದೆ. ಆದರೆ ಈಗ ನವಲಗುಂದ ಮಾರುಕಟ್ಟೆಗೆ ಬರುವ ಗ್ರಾಹಕರಿಗೆ ತಲೆನೋವಾಗಿ ಕಾಡುತ್ತಿರೋದು ಪಾರ್ಕಿಂಗ್ ಸಮಸ್ಯೆ ಎಂದರು ತಪ್ಪಾಗಲಾರದ್ದು...
ಹೌದು ಈಗಾಗಲೇ ದೀಪಾವಳಿಗೆ ಕೇವಲ ಎರಡು ದಿನವಷ್ಟೇ ಬಾಕಿ ಉಳಿದಿದ್ದು, ನವಲಗುಂದದ ಜನತೆ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಅದೇ ರೀತಿ ವ್ಯಾಪಾರಸ್ಥರು ಸಹ ಮಾರುಕಟ್ಟೆಯಲ್ಲಿ ಆಕಾಶ ಬುಟ್ಟಿ, ಅಲಂಕಾರಿತ ವಸ್ತುಗಳು, ಉಡುಪುಗಳು ಸೇರಿದಂತೆ ಹೂ ಹಣ್ಣಿನ ವ್ಯಾಪಾರವನ್ನು ಭರ್ಜರಿಯಾಗಿಯೇ ನಡೆಸುತ್ತಿದ್ದಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ಪಾರ್ಕಿಂಗ್ ಸಮಸ್ಯೆ ಎದ್ದು ಕಾಣ ತೊಡಗಿದೆ. ಪಾರ್ಕಿಂಗ್ ಸ್ಥಳ ಸಂಪೂರ್ಣ ಭರ್ತಿಯಾಗಿದ್ದು, ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ಸಂಚರಿಸೋ ಜನರಿಗಷ್ಟೇ ಅಲ್ಲದೆ ಸಂಚಾರ ನಡೆಸೋ ವಾಹನಗಳಿಗೂ ತೊಂದರೆ ಉಂಟಾಗುತ್ತಿದ್ದು, ಮಾರುಕಟ್ಟೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ನೀಡಬೇಕಿದೆ...
Kshetra Samachara
14/11/2020 12:46 pm